ಕುಂಬಳೆ: ಉಳುವಾರ ಅಸ್ಸಯ್ಯಿದ್ ಇಸ್ಮಾಯಿಲ್ ಅಲ್ ಬುಖಾರಿ ಮಸೀದಿಯ ಮಕಾಮ್ ಉರೂಸ್ ಧಾರ್ಮಿಕ ಉಪನ್ಯಾಸ ಮಾಲಿಕೆ ಏಪ್ರಿಲ್ 25 ರಿಂದ ಮೇ 5 ರವರೆಗೆ ನಡೆಯಲಿದೆ ಎಂದು ಸಂಬಂಧಪಟ್ಟವರು ಕುಂಬಳೆ ಪ್ರೆಸ್ ಪೋರಂನಲ್ಲಿ ಸೋಮವಾರ ಸಂಜೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮೇ 5 ರಂದು ಹಗಲಿನಲ್ಲಿ ಉರೂಸ್ ನಡೆಯಲಿದ್ದು, ಏಪ್ರಿಲ್ 25 ರಿಂದ ಮೇ 4 ರವರೆಗೆ ಸರಣಿ ಧಾರ್ಮಿಕ ಉಪನ್ಯಾಸಗಳು ನಡೆಯಲಿವೆ. ಎಪ್ರಿಲ್ 25 ರಂದು ಬೆಳಗ್ಗೆ 10 ಕ್ಕೆ ಸೈಯದ್ ಕೆ.ಎಸ್.ಅಟ್ಟಕೋಯ ತಂಙಳ್ ಧ್ವಜಾರೋಹಣ ನೆರವೇರಿಸುವರು. ರಾತ್ರಿ 8.30ಕ್ಕೆ ಸಭೆ ನಡೆಯಲಿದೆ.
ಕಾಸರಗೋಡು ಸಂಯುಕ್ತ ಜಮಾಅತ್ ಖಾಸಿ ಪ್ರೊ. ಆಲಿಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆಯಲ್ಲಿ ಸೈಯದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಲಿದ್ದಾರೆ. ಎನ್‍ಪಿಎಂ ಸೈಯದ್ ಶರಫುದ್ದೀನ್ ತಂಙಳ್ ಅಲ್ ಹಾದಿ ರಬ್ಬಾನಿ ಪ್ರಾರ್ಥನೆಯನ್ನು ನೆರವೇರಿಸುವರು.
ಅಬ್ದುಲ್ ಮಜೀದ್ ಬಾಖವಿ ಕೋಡುವಳ್ಳಿ ಉಪನ್ಯಾಸ ನೀಡಲಿದ್ದಾರೆ. ಬಂಬ್ರಾಣ ಖತೀಬ್ ಜುನೈದ್ ಫೈಝಿ, ಕೋಯ ತಂಙಳ್ ಮಸೀದಿಯ ಖತೀಬ್ ಅಬ್ದುಲ್ ಖಾದಿರ್ ಸಖಾಫಿ, ಒಳಯಂ ಖತೀಬ್ ಅನ್ವರ್ ಅಲಿ ದಾರಿಮಿ, ಶಿರಿಯಾ ಖತೀಬ್ ಮುಹಮ್ಮದ್ ಶಾಫಿ ಸಅದಿ, ಇಚ್ಲಂಗೋಡು ಖತೀಬ್ ಜಹ್ಫರ್ ಬುಸ್ತಾನಿ, ಹೇರೂರು ಖತೀಬ್ ಮತ್ತು ಮುದರಿಸ್ ಅಬ್ದುಲ್ ಜಲೀಲ್ ಫೈಝಿ, ಸಮಿತಿಯ ಅಧ್ಯಕ್ಷರಾದ ಉರ್ರಿಯಾತ್ ಜಲೀಲ್ ಫೈಝಿ, ಅಬ್ದುಲ್ ಖಾದಿರ್, ಉಳುವಾರ ಹಿದಾಯತುಲ್ ಇಸ್ಲಾಂ ಮದ್ರಸ ಸದ್ರ್ ಮುಅಲ್ಲಿಂ ಅಬೂಬಕರ್ ಸಖಾಫಿ, ಸಿದ್ದೀಕ್ ಸಖಾಫಿ, ಅಬ್ದುಲ್ ಗಫೂರ್ ಸಅದಿ ಉಪಸ್ಥಿತರಿರುವರು. ಉಳುವಾರ್ ಜಮಾಅತ್ ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞÂ್ಞ ಯುಎ ನೇತೃತ್ವ ವಹಿಸುವರು.
26ರಂದು ರಾತ್ರಿ 8.30ಕ್ಕೆ ಕೂಟಂಪಾರ ಅಬ್ದುಲ್ ರಹ್ಮಾನ್ ದಾರಿಮಿ, 27ರಂದು ಅನ್ವರ್ ಅಲಿ ಹುದವಿ, 28ರಂದು ಶಾಫಿ ಸಖಾಫಿ ಮುಂಡಂಬ್ರ, 29ರಂದು ಮುಹಮ್ಮದ್ ಹನೀಫ್ ನಿಝಾಮಿ, 30ರಂದು ಮಶೂದ್ ಸಖಾಫಿ ಗುಡಲೂರು ಉಪನ್ಯಾಸ ನೀಡಲಿದ್ದಾರೆ. ಮೇ 1 ರಂದು ಶಮೀರ್ ದಾರಿಮಿ ಕೊಲ್ಲಂ, ಮೇ 2 ರಂದು ಪೆರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಮತ್ತು ಮೇ 3 ರಂದು ಖಲೀಲ್ ಹುದವಿ ವಿವಿಧ ವಿಷಯಗಳ ಕುರಿತು ಮಾತನಾಡಲಿದ್ದಾರೆ.
4ರಂದು ರಾತ್ರಿ 8 ಕ್ಕೆ ನಡೆಯುವ ಸಮಾರೋಪ ಸಮಾರಂಭವನ್ನು ಸೈಯದ್ ಇಬ್ರಾಹಿಂ ಖಲೀಲ್ ಬುಖಾರಿ ಉದ್ಘಾಟಿಸುವರು. ಕುಂಬೋಳ್ ಸಯ್ಯಿದ್ ಜಹಫರ್ ಸ್ವಾದಿಕ್ ತÀÐಳ್ ಪ್ರಾರ್ಥನೆ ನೆರವೇರಿಸುವರು. ಮಂಜೇಶ್ವರಂ ಶಾಸಕ ಎ.ಕೆ.ಎಂ. ಅಶ್ರಫ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಉಳುವಾರ್ ಮುದರಿಸ್ ಖತೀಬ್ ಅಬ್ದುಲ್ ರಶೀದ್ ಕಾಮಿಲ್ ಸಖಾಫಿ ಅಧ್ಯಕ್ಷತೆ ವಹಿಸುವರು. ನೌಫಲ್ ಸಖಾಫಿ ಕಳಸ ಮುಖ್ಯ ಭಾಷಣ ಮಾಡುವರು. ಇಬ್ರಾಹಿಂ ಮದನಿ ಜಾಲ್ಸೂರ್, ಕೊಡ್ಯಮೆ ಖತೀಬ್ ಮಹ್ಮದ್ ಸಅದಿ, ಅಬ್ದುಲ್ ರಝಾಕ್ ಫೈಝಿ, ಮುಖ್ಯ ಜಮಾತ್ ಖತೀಬರು ಮತ್ತು ಮುದರಿಸ್, ಆರಿಕ್ಕಾಡಿ ಕಡವತ್ ಖತೀಬ್ ಅಬ್ದುಲ್ ಮಜೀದ್ ಅಮಾನಿ, ಕುಂಬಳೆ ಖತೀಬ್ ಉಮರ್ ಹುದವಿ ಪೂಲಪದವು, ದಂಡೆಗೋಳಿ ಖತೀಬರು ಮೊದಲಾದವರು ಉಪಸ್ಥಿತರಿರುವರು. ಪ್ರತಿದಿನ ರಾತ್ರಿ 8.30ಕ್ಕೆ ಉಪನ್ಯಾಸ ಆರಂಭವಾಗಲಿದೆ.
ಮೇ 5 ರಂದು ಬೆಳಿಗ್ಗೆ 8 ಗಂಟೆಗೆ ಸೈಯದ್ ಅಲಿ ತಂಙಳ್ ಕುಂಬೋಳ್ ಮೌಲಿದ್ ಮಜ್ಲಿಸ್ ಮತ್ತು ಸಾಮೂಹಿಕ ಪ್ರಾರ್ಥನೆಗೆ ಚಾಲನೆ ನೀಡಲಿದ್ದಾರೆ. ನಂತರ ಅನ್ನಸಂತರ್ಪಣೆಯೊಂದಿಗೆ ಉರೂಸ್ ಮುಕ್ತಾಯವಾಗಲಿದೆ.
ಸುದ್ದಿಗೋಷ್ಠಿಯಲ್ಲಿ ಮಸೀದಿ ಸಮಿತಿ ಅಧ್ಯಕ್ಷ ಕೆ.ಎಂ ಇದ್ದೀನ್ ಕುಂಞÂ,ಉಪಾಧ್ಯಕ್ಷ ಎಂ ಅಬ್ದುಲ್ಲ, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕುಂಞÂ್ಞ ಯು.ಎ, ಜೊತೆ ಕಾರ್ಯದರ್ಶಿ ಮುಹಮ್ಮದ್ ಕುಂಞÂ್ಞ ಉಳುವಾರ್, ಪಿ.ಎ.ಅಬ್ದುಲ್ ಕಾದಿರ್, ಮಾಮು ಮತ್ತು ಯೂಸುಫ್ ಉಳುವಾರ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.