ತಿರುವನಂತಪುರಂ: ಬಿಸಿಗಾಳಿಯ ಸಾಧ್ಯತೆ ಹಾಗೂ ಅಧಿಕ ತಾಪಮಾನದ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಐಟಿಐಗಳನ್ನು ಇಂದಿನಿಂದ ಮೇ 4ರವರೆಗೆ ಮುಚ್ಚಲಾಗುವುದು ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಅಖಿಲ ಭಾರತ ಟ್ರೇಡ್ ಟೆಸ್ಟ್ ಹತ್ತರದಲ್ಲಿದ್ದು, ಪಠ್ಯಕ್ರಮವನ್ನು ಪೂರ್ಣಗೊಳಿಸಬೇಕಾದ ಕಾರಣ ಈ ದಿನಗಳಲ್ಲಿ ಆನ್‍ಲೈನ್ ತರಗತಿಗಳನ್ನು ನಡೆಸಲಾಗುವುದು. ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಇದಕ್ಕೆ ಬೇಕಾದ ವ್ಯವಸ್ಥೆ ಮಾಡಬೇಕು.
ಇದೇ ವೇಳೆ ಅಧಿಕಾರಿಗಳು ಹಾಗೂ ಶಿಕ್ಷಕರು ಸಂಸ್ಥೆಗಳಲ್ಲಿ ಹಾಜರಿರಬೇಕು ಎಂದು ನಿರ್ದೇಶಕರು ಸೂಚಿಸಿರುವರು. ಈ ಹಿಂದೆ, ಹಗಲಿನಲ್ಲಿ ಹೊರಗೆ ಕೆಲಸ ಮಾಡುವ ಕಾರ್ಮಿಕರಿಗೆ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ವಿಶ್ರಾಂತಿ ನೀಡುವ ಆದೇಶವನ್ನು ಮೇ 15 ರವರೆಗೆ ವಿಸ್ತರಿಸಲಾಗಿದೆ.