HEALTH TIPS

ಉರಿ ಬಿಸಿಲು: ಈ 5 ಆಹಾರ ಸೇವಿಸಬೇಡಿ, ದೇಹ ತಂಪಾಗಿಸಲು ಈ 10 ಆಹಾರ ದಿನನಿತ್ಯ ಬಳಸಿ

 ಈ ವರ್ಷ ಬೇಸಿಗೆ ಉಳಿದೆಲ್ಲಾ ಬೇಸಿಗೆಯಂತಲ್ಲ, ಬಿರು ಬಿಸಿಲು.... ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಬಿಸಿಲಿನ ತೀವ್ರತೆ ತುಂಬಾನೇ ಇದೆ. ಸಂಜೆಯಾದರೆ ಬಿಸಿ ಗಾಳಿ ಕಡಿಮೆಯಾಗಿರಲ್ಲ. ಅಬ್ಬಾ ಎಂಥ ಸೆಕೆ ಎಂದು ಹೇಳುವವರೇ ಎಲ್ಲರೂ.... ಇಂಥ ಬೇಸಿಗೆ ಇರುವವರು ಮಕ್ಕಳು-ದೊಡ್ಡವರು ಆರೋಗ್ಯದ ಕಡೆಗೆ ತುಂಬಾನೇ ಗಮನಹರಿಸಬೇಕು.

ನಿಮ್ಮ ಆರೋಗ್ಯವನ್ನು ಕಾಪಾಡಲು ಆಹಾರಕ್ರಮದ ಕಡೆಗೆ ತುಂಬಾನೇ ಗಮನಹರಿಸಬೇಕು. ನೀವು ದೇಹವನ್ನು ತಂಪಾಗಿಸುವ ಆಹಾರ ಸೇವಿಸಬೇಕು, ಆದರೆ ಈ ಆಹಾರ ಸೇವಿಸಲೇಬೇಡಿ... 

1. ಜಂಕ್‌ ಫುಡ್‌, ಕರಿದ ಪದಾರ್ಥ

ಈ ಆಹಾರಗಳನ್ನು ತಿನ್ನಲು ಖುಷಿಯಾಗುವುದು, ಆದರೆ ಇಷ್ಟೊಂದು ಉರಿ ಬೇಸಿಗೆ ಇರುವಾಗ ಈ ಬಗೆಯ ಆಹಾರ ಸೇವಿಸಬೇಡಿ, ಅಲ್ಲದೆ ಈ ಬಗೆಯ ಆಹಾರಗಳು ಆರೋಗ್ಯಕ್ಕೂ ಒಳ್ಳೆಯದಲ್ಲ, ಈ ಸಮಯದಲ್ಲಿ ಸೇವಿಸಿದರೆ ಅಜೀರ್ಣ, ಹೊಟ್ಟೆ ಉಬ್ಬುವುದು, ವಾಂತಿ ಈ ಬಗೆಯ ಸಮಸ್ಯೆ ಕಂಡು ಬರುವುದು.

2. ಉಪ್ಪಿನಕಾಯಿ ಬಳಸಬೇಡಿ

ಊಟಕ್ಕೆ ಉಪ್ಪಿನಕಾಯಿ ಇದ್ದರೆ ಚೆಂದ ಆದರೆ ಈಗ ಉಷ್ಣಾಂಶ ಅಧಿಕವಿರುವುದರಿಂದ ಉಪ್ಪಿನಕಾಯಿ ಬಳಸದಿದ್ದರೆ ಒಳ್ಳೆಯದು. ಇದನ್ನು ತಿನ್ನುವುದರಿಂದ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು, ಸುಸ್ತು ಉಂಟಾಗುವುದು.

3. ತುಂಬಾನೇ ಡ್ರೈ ಫ್ರೂಟ್ಸ್ ಸೇವಿಸಬೇಡಿ

ಡ್ರೈ ಫ್ರೂಟ್ಸ್ ತುಂಬಾ ಒಳ್ಳೆಯದು. ಆದರೆ ಬೇಸಿಗೆಯಲ್ಲಿ ಇದನ್ನು ಕಡಿಮೆ ಸೇವಿಸಿ, ಬದಲಿಗೆ ತಾಜಾ ಹಣ್ಣುಗಳನ್ನು ಸೇವಿಸಿ. ಡ್ರೈ ಫ್ರೂಟ್ಸ್‌ ತಿನ್ನುವುದರಿಂದ ಮೈ ಉಷ್ಣಾಂಶ ಹೆಚ್ಚಾಗುವುದು, ಆದ್ದರಿಂದ ಡ್ರೈ ಫ್ರೂಟ್ಸ್‌ ಬಳಸದಿದ್ದರೆ ಒಳ್ಳೆಯದು.

4. ಹೆಚ್ಚು ಕಾಫಿ ಕುಡಿಯಬೇಡಿ

ಕೆಲವರಿಗೆ 4-5 ಲೋಟ ಅಥವಾ ಅದಕ್ಕಿಂತ ಹೆಚ್ಚು ಕಾಫಿ ಕುಡಿಯುವ ಅಭ್ಯಾಸವಿರುತ್ತದೆ, ಆದರೆ ಈ ಬೇಸಿಗೆಯಲ್ಲಿ ಆ ಅಭ್ಯಾಸಕ್ಕೆ ಕಡಿವಾಣ ಹಾಕುವುದು ಒಳ್ಳೆಯದು. ನೀವು ಒಂದು ಅಥವಾ ಎರಡು ಲೋಟ ಕಾಫಿ ಕುಡಿದರೆ ಒಳ್ಳೆಯದು.

5. ಸೋಡಾ, ತಂಪು ಪಾನೀಯ ಸೇವಿಸಬೇಡಿ

ಈ ಉರಿ ಬಿಸಿಲಿಗೆ ಸೋಡಾ ಕುಡಿಯಬೇಕು, ತಂಪು ಪಾನೀಯ ಕುಡಿಯಬೇಕು ಎಂದನಿಸುವುದು, ಆದರೆ ಇವುಗಳನ್ನು ಕುಡಿಯುವುದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಈ ಆಹಾರಗಳನ್ನು ಪ್ರತಿನಿತ್ಯ ಬಳಸಿ 

ಕಲ್ಲಂಗಡಿ ಹಣ್ಣು ತುಂಬಾ ಒಳ್ಳೆಯದು, ಇದು ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ಕರ್ಬೂಜ
ಈ ಹಣ್ಣು ತುಂಬಾನೇ ತಂಪು, ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಕಾಪಾಡಲು ತುಂಬಾನೇ ಸಹಕಾರಿ.

ಸೌತೆಕಾಯಿ
ಸೌತೆಕಾಯಿ ತಿನ್ನುವುದರಿಂದ ಮೈಯಲ್ಲಿ ಸೆಕೆಯಿಂದ ಬೊಬ್ಬೆ ಏಳುವುದನ್ನು ತಡೆಗಟ್ಟಬಹುದು.

ಪುದೀನಾ
ಪುದೀನಾ ಟೂ ಕುಡಿಯಿರಿ, ನಿಂಬು ಪಾನೀಯ ಮಾಡಿ ಅದರಲ್ಲಿ ಪುದೀನಾ ಹಾಕಿ ಕುಡಿಯಬಹುದು. ಇದು ದೇಹವನ್ನು ತಂಪಾಗಿಡಲು ಸಹಕಾರಿ.

ಮಾಂಸಾಹಾರಕ್ಕಿಂತ ತರಕಾರಿ ಹೆಚ್ಚಾಗಿ ಬಳಸಿ
ಈ ಬೇಸಿಗೆಯಲ್ಲಿ ಮಾಂಸಾಹಾರ ತಿಂದರೆ ಜೀರ್ಣಕ್ರಿಯೆ ಕಷ್ಟವಾಗುವುದು, ತರಕಾರಿ ಸೇವಿಸಿ ಮಲ ಬದ್ಧತೆ ಸಮಸ್ಯೆ ತಡೆಗಟ್ಟಬಹುದು.

ಎಳನೀರು
ದಿನಾ ಒಂದು ಎಳನೀರು ಕುಡಿಯುವುದು ತುಂಬಾನೇ ಒಳ್ಳೆಯದು. ಎಳನೀರು ಸೇವಿಸುವುದರಿಂದ ದೇಹಕ್ಕೆ ಶಕ್ತಿ ದೊರೆಯುವುದು, ಎಲೆಕ್ಟ್ರೋಲೈಟ್ಸ್ ಕಾಪಾಡಲು ಸಹಕಾರಿ.

ಮೆಂತೆ
ಒಂದು ಚಮಚ ಮೆಂತೆಯನ್ನು ನೀರಿಗೆ ನೆನೆಹಾಕಿ ಆ ನೀರನ್ನು ಬೆಳಗ್ಗೆ ಕುಡಿಯಿರಿ. ಮಧುಮೇಹ ನಿಯಂತ್ರಿಸಲು ಕೂಡ ಮೆಂತೆ ಸಹಕಾರಿ.

ಕಾಮಕಸ್ತೂರಿ
ಕಾಮಕಸ್ತೂರಿ ಕೂಡ ದೇಹವನ್ನು ತಂಪಾಗಿ ಇಡುತ್ತದೆ. ಜ್ಯೂಸ್‌ಗೆಲ್ಲಾ ಕಾಮ ಕಸ್ತೂರಿ ಹಾಕಿ ಕುಡಿಯಿರಿ.

ಜೀರಿಗೆ, ಸೋಂಪು: ಸೋಂಪು ಅಥವಾ ಜೀರಿಗೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಕುಡಿಯಿರಿ. ಅಡುಗೆಗೆ ಇವುಗಳನ್ನು ಬಳಸಿ.

ಮಜ್ಜಿಗೆ: ದಿನಾ ಮಜ್ಜಿಗೆ ಸೇವಿಸಿ, ಇದು ದೇಹವನ್ನು ತಂಪಾಗಿಡುತ್ತದೆ, ಮಧ್ಯಾಹ್ನ ಪ್ರತಿದಿನ ಮಜ್ಜಿಗೆ ಸೇವಿಸಿ, ಇದರಿಂದ ದೇಹದಲ್ಲಿ ಉಷ್ಣಾಂಶ ಹೆಚ್ಚಾಗದಂತೆ ನೋಡಿಕೊಳ್ಳಬಹುದು.






Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries