ಉಪ್ಪಳ: ಉಪ್ಪಳ ಪೇಟೆಯಲ್ಲಿ ಎಟಿಎಂ ಯಂತ್ರಕ್ಕೆ ತುಂಬಲು ತಂದಿದ್ದ 50ಲಕ್ಷ ರೂ. ನಗದು ದೋಚಿದ ಆರೋಪಿಗಳದ್ದೆಂದು ಸಂಶಯಿಸಲಾಗಿರುವ ದೃಶ್ಯ ಕಾಸರಗೋಡು ರೈಲ್ವೆ ನಿಲ್ದಾಣದ ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ. ಕಳವುಗೈದ ಹಣದೊಂದಿಗೆ ಆಟೋರಿಕ್ಷಾದಲ್ಲಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದರೆನ್ನಲಾಗಿದೆ. ರೈಲ್ವೆ ನಿಲ್ದಾಣದಿಂದ ಎಲ್ಲಿಗೆ ತೆರಳಿದ್ದಾರೆಂಬ ಬಗ್ಗೆ ಸಿಸಿ ಕ್ಯಾಮರಾದಲ್ಲಿ ಮಾಹಿತಿ ಲಭ್ಯವಾಗಿಲ್ಲ. ಸಿಸಿ ಕ್ಯಾಮರಾದಲ್ಲಿ ಲಭಿಸಿದ ಮಾಹಿತಿಯನ್ವಯ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಏ. 27ರಂದು ಹಾಡಹಗಲು ಉಪ್ಪಳ ಪೇಟೆಯಲ್ಲಿ ಎಟಿಎಂಗೆ ತುಂಬಲು ತಂದಿದ್ದ 50ಲಕ್ಷ ರೂ. ಹಣವನ್ನು ಏಜನ್ಸಿಗಳ ವಾಹನದ ಗಾಜು ಒಡೆದು ಎಗರಿಸಲಾಗಿತ್ತು. ಕೃತ್ಯದ ಹಿಂದೆ ತಮಿಳ್ನಾಡಿನ 'ತಿರುಟ್'ಎಂಬ ತಂಡದ ಕೈವಾಡಿವಿರುವ ಬಗ್ಗೆ ಸಂಶಯ ವ್ಯಕ್ತಪಡಿಸಲಾಗಿತ್ತು. ಉಪ್ಪಳದಲ್ಲಿ ಹಣ ದೋಚಿದ ಅದೇ ದಿನ ಬೆಳಗ್ಗೆ ಮಂಗಳೂರಿನಲ್ಲಿ ಕಾರಿನೊಳಗಿದ್ದ ಲ್ಯಾಪ್‍ಟಾಪನ್ನು ಗಾಜು ಒಡೆದು ಎಗರಿಸಲಾಗಿತ್ತು.