ಕುಂಬಳೆ: ದೇಲಂಪಾಡಿಯ ತುಳುನಾಡ ತುಡರ್ ಕ್ರಿಯೇಶನ್ಸ್ ನ 50ನೇ ಸಂಚಿಕೆಯ ಸಂಭವ್ರಮಾಚರಣೆ ವಿವಿಧ ಕಾರ್ಯಕ್ರಮಗಳೊಂದಿಗೆ ದೇಲಂಪಾಡಿ ಕ್ಷೇತ್ರದ ಮಹೇಶ್ವರ ಸಭಾ ಮಂಟಪದಲ್ಲಿ ಜರಗಿತು. ಹಿರಿಯ ಸಾಮಾಜಿಕ,ಸಾಂಸ್ಕøತಿಕ ಮುಂದಾಳು ಪ್ರಭಾಕರ ಕಲ್ಲೂರಾಯ ಬನದಗದ್ದೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನ್ಯಾಯವಾದಿ, ಲೇಖಕ ಥೋಮಸ್ ಡಿಸೋಜ ಸೀತಾಂಗೋಳಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಮಲಬಾರ್ ದೇವಸ್ವಂ ಬೋರ್ಡಿನ ಸದಸ್ಯ ಶಂಕರ ರೈ ಮಾಸ್ತರ್, ಪುತ್ತಿಗೆ ಪಂ.ಸದಸ್ಯೆ ಪ್ರೇಮಾ ಎಸ್.ರೈ, ಗಡಿನಾಡ ಗಾನ ಕೋಗಿಲೆಯ ವಸಂತ ಬಾರಡ್ಕ, ವೇಣುಗೋಪಾಲ ರೈ ಪುತ್ತಿಗೆ, ತುಳುನಾಡ ತುಡರ್ ಕ್ರಿಯೇಶನ್ಸ್ ನ ರಂಜಿತ್ ದೇಲಂಪಾಡಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕವಿ,ಗಾಯಕ ಪೆರುಮಾಳ್ ಲಕ್ಷ್ಮಣ್ ಐವರ್ನಾಡು ರಚಿಸಿ ಹಾಡಿದ "ಪಂದಳದ ಕಂದ" ಎಂಬ ಭಕ್ತಿಗೀತೆಯನ್ನು ಸಿ.ಟಿ.ಮಂಜುನಾಥ ಗುರುಸ್ವಾಮಿ ದಾವಣಗೆರೆ ಬಿಡುಗಡೆಗೊಳಿಸಿದರು. ಪ್ರವೀಣ್ ಡಿ.ದೇಲಂಪಾಡಿ ಸ್ವಾಗತಿಸಿ, ಶೇಖರ್ ಪೂಜಾರಿ ಅರಿಯಾಳ ವಂದಿಸಿದರು. ವಿ.ಜಿ.ಕಾಸರಗೋಡು ನಿರೂಪಿಸಿದರು. ಬಳಿಕ ರಸಮಂಜರಿ,ನೃತ್ಯ ವೈವಿಧ್ಯ ಕಾರ್ಯಕ್ರಮ ಜರಗಿತು.