ಉಪ್ಪಳ : ಉಪ್ಪಳ ಪೇಟೆಯಲ್ಲಿ ಎಟಿಎಂ ಯಂತ್ರಕ್ಕೆ ತುಂಬಲು ತಂದಿದ್ದ 50ಲಕ್ಷ ರೂ. ನಗದನ್ನು ಹಾಡಹಗಲು ದೋಚಿದ ತಂಡಕ್ಕೆ ತಮಿಳ್ನಾಡಿನ 'ತಿರುಟ್' ಎಂಬ ತಂಡದ ಕೈವಾಡವಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿದೆ. ತಂಡದಲ್ಲಿ ಸುಮಾರು 30ಮಂದಿಯಿದ್ದು, ಕಳವು, ದರೊಡೆ, ಅಕ್ರಮ ಸ್ಪಿರಿಟ್ ಸಾಗಾಟ ದಂಧೆಯಲ್ಲೂ ಶಾಮೀಲಾಗುತ್ತಿದ್ದಾರೆ. ಒಂದು ಪರದೇಶದಲ್ಲಿ ಕಳವು ನಡೆಸುವ ತಂಡ ತಕ್ಷಣ ಅಲ್ಲಿಂದ ದೂರ ಪರಾರಿಯಾಗುತ್ತಿರುವುದರಿಂದ ಇವರ ಬಂಧನ ಸಾಧ್ಯವಘುತ್ತಿಲ್ಲ. ದರೋಡೆ, ಕಳವು ನಡೆಸುವ ಪ್ರದೇಶದ ಬಗ್ಗೆ ಮೊದಲೇ ಆಗಮಿಸಿ, ಕೂಲಂಕಷವಾಗಿ ಮಾಹಿತಿ ಸಂಗ್ರಹಿಸಿದ ನಂತರ ಕ್ರತ್ಯಕ್ಕೆ ಮುಂದಾಗುತ್ತಾರೆ ಎಂಬುದಾಗಿ ಪೊಲೀಸರು ತಿಳಿಸುತ್ತಾರೆ. ಉಪ್ಪಳದಲ್ಲಿ ಮಾ. 27ರಂದು ಕಳವು ನಡೆದಿದ್ದು, ಒಂಬತ್ತು ದಿವಸ ಕಳೆದರೂ ಆರೋಪಿಗಳ ಪತ್ತೆ ಸಾಧ್ಯವಾಗಿಲ್ಲ.
ಉಪ್ಪಳ ಬಸ್ ನಿಲ್ದಾಣ ಸನಿಹದ ಎಟಿಎಂಗೆ ಹಣ ತುಂಬಿ, ವಾಹನದಲ್ಲಿದಗ್ದ ಇನ್ನೊಂದು ಬ್ಯಾಗ್‍ನ ಹಣ ತೆಗೆಯಲು ಆಗಮಿಸಿದಾಗ, ವಾಹನದ ಗಾಜು ಒಡೆದು ಹಣವಿದ್ದ ಬ್ಯಾಗ್ ಎಗರಿಸಿರುವುದು ಬೆಳಕಿಗೆ ಬಂದಿತ್ತು.