ಕಾಸರಗೋಡು: ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಎಪ್ರಿಲ್ 18 19, 20, 21, ಮತ್ತು 22 ರಂದು ನಡೆದ ಮನೆಮನೆ ಮತದಾನ ಪ್ರಕ್ರಿಯೆಯಲ್ಲಿ 85ಕ್ಕಿಂತ ಹೆಚ್ಚು ವಯಸ್ಸಾದ 5202 ಮಂದಿ ಹಿರಿಯ ಮತದಾರರು ಹಾಗೂ 3520 ವಿಕಲಚೇತನ ಮತದಾರರು ಮತದಾನ ಮಾಡಿರುವರು.
18, 19, 20, 21, 22 ರಂದು ನಡೆದ ಕ್ಷೇತ್ರವಾರು ಮತದಾನ: ಮಂಜೇಶ್ವರ ಕ್ಷೇತ್ರದಲ್ಲಿ 85ಕ್ಕಿಂತ ಮೇಲ್ಪಟ್ಟ 308 ಹಿರಿಯ ನಾಗರಿಕರು 678 ವಿಕಲಚೇತನ ಮತದಾರರು ಮತದಾನ ಮಾಡಿದ್ದಾರೆ. ಕಾಸರಗೋಡು ಕ್ಷೇತ್ರದಲ್ಲಿ 85 ಕ್ಕಿಂತ ಮೇಲ್ಪಟ್ಟ ವಯಸ್ಸಿನ 321 ಹಿರಿಯ ನಾಗರಿಕರು ಹಾಗೂ 427 ವಿಶೇಷ ಚೇತನ ಮತದಾರರು ಮತದಾನ ಮಾಡಿದರು. ಉದುಮ ಕ್ಷೇತ್ರದಲ್ಲಿ 85ಕ್ಕಿಂತ ಹೆಚ್ಚು ಪ್ರಾಯವಿರುವ 617 ಹಿರಿಯ ಮತದಾರರು, 669 ವಿಕಲಚೇತನ ಮತದಾರರು ಮತದಾನ ಮಾಡಿದರು. ಕಾಞಂಗಾಡ್ ಕ್ಷೇತ್ರದಲ್ಲಿ 85 ಕ್ಕಿಂತ ಮೇಲ್ಪಟ್ಟ ಹರೆಯದ 91 ಹಿರಿಯ ನಾಗರಿಕರು, 543 ವಿಕಲಚೇತನರು ಮತದಾನ ಮಾಡಿದರು. ತ್ರಿಕರಿಪುರ ಕ್ಷೇತ್ರದಲ್ಲಿ 85ಕ್ಕಿಂತ ಹೆಚ್ಚು ಪ್ರಾಯವಿರುವ 863 ಹಿರಿಯ ನಾಗರಿಕರು ಮತ್ತು 562 ಮಂದಿ ವಿಕಲಚೇತನ ಮತದಾರರು ಮತದಾನ ಮಾಡಿದರು. ಪಯ್ಯನ್ನೂರು ಕ್ಷೇತ್ರದಲ್ಲಿ 85ಕ್ಕಿಂತ ಹೆಚ್ಚು ಪ್ರಾಯವಿರುವ 1142 ಹಿರಿಯ ನಾಗರಿಕರು ಹಾಗೂ 393 ವಿಕಲಚೇತನ ಮತದಾರರು ಮತದಾನ ಮಾಡಿದರು. ಕಲ್ಯಾಶ್ಶೇರಿ ಮಂಡಲದಲ್ಲಿ 85ಕ್ಕಿಂತ ಹೆಚ್ಚು ಪ್ರಾಯ ವಿರುವ 1401 ಹಿರಿಯ ನಾಗರಿಕರು ಹಾಗೂ 248 ಮಂದಿ ವಿಕಲಚೇತನ ಮತದಾರರು ಮತದಾನ ಮಾಡಿದರು.
ಜಿಲ್ಲೆಯಲ್ಲಿ ವಿಕಲಚೇತನ ವಿಭಾಗಕ್ಕೆ ಒಳಪಟ್ಟ 3687 ಹಾಗೂ 85ಕ್ಕಿಂತ ಹೆಚ್ಚು ಪ್ರಾಯ ವಿರುವ 5467 ಸೇರಿ ಒಟ್ಟು 9154 ಮಂದಿ ಮನೆಯಲ್ಲಿ ಮತದಾನಕ್ಕೆ ಅರ್ಹರಾಗಿದ್ದಾರೆ. ಮಂಜೇಶ್ವರ ಮಂಡಲದಲ್ಲಿ ವಿಕಲಚೇತನ ವಿಭಾಗದಲ್ಲಿ 690 ಮಂದಿ ಹಾಗೂ 327 ಮಂದಿ ಹಿರಿಯ ನಾಗರಿಕರು ಸೇರಿರುವರು. ಕಾಸರಗೋಡು ಮಂಡಲದಲ್ಲಿ 456 ವಿಕಲಚೇತನರು, 324 ಹಿರಿಯ ನಾಗರಿಕರು ಇದ್ದಾರೆ. ಉದುಮ ಮಂಡಲದಲ್ಲಿ 709 ವಿಕಲಚೇತನರು, 616 ಹಿರಿಯ ನಾಗರಿಕರು, ಕಾಞಂಗಾಡ್ ಮಂಡಲದಲ್ಲಿ 547 ವಿಕಲ ಚೇತನರು 931 ಹಿರಿಯ ನಾಗರಿಕರು, ತ್ರಿಕರಿಪುರ ಮಂಡಲದಲ್ಲಿ 567 ವಿಕಲಚೇತನ ಮತದಾರೂ, 892 ಹಿರಿಯ ಮತದಾರರೂ, ಪಯ್ಯನ್ನೂರು ಮಂಡಲದಲ್ಲಿ 419 ವಿಕಲಚೇತನ ಮತದಾರರು, 1178 ಹಿರಿಯ ನಾಗರಿಕರರೂ, ಕಲ್ಯಾಶ್ಶೇರಿ ಮಂಡಲದಲ್ಲಿ 299 ವಿಕಲಚೇತನರು, 1199 ಹಿರಿಯ ನಾಗರಿಕರು ಇದ್ದಾರೆ.