ಚಂಡೀಗಢ: ಶಾಲಾ ಬಸ್‌ವೊಂದು ಮಗುಚಿ ಆರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಮಹೇಂದ್ರಗಢದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಚಂಡೀಗಢ: ಶಾಲಾ ಬಸ್‌ವೊಂದು ಮಗುಚಿ ಆರು ವಿದ್ಯಾರ್ಥಿಗಳು ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿರುವ ಘಟನೆ ಹರಿಯಾಣದ ಮಹೇಂದ್ರಗಢದಲ್ಲಿ ನಡೆದಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಗಾಯಾಳು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಪ್ರಾಥಮಿಕ ವರದಿಗಳ ಪ್ರಕಾರ, ಕನೀನಾ ಪಟ್ಟಣದಲ್ಲಿ ವಾಹನವನ್ನು ಓವರ್‌ಟೇಕ್ ಮಾಡುವಾಗ ಶಾಲಾ ಬಸ್ ಪಲ್ಟಿಯಾಗಿದೆ.
'ಬಸ್ ಚಾಲಕನನ್ನು ಬಂಧಿಸಲಾಗಿದೆ. ಆತನನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಿದ ಬಳಿಕವಷ್ಟೇ ಪಾನಮತ್ತನಾಗಿದ್ದಾನೆಯೇ ಎಂಬುದು ತಿಳಿದು ಬರಲಿದೆ. ನಿರ್ಲಕ್ಷ್ಯದ ಚಾಲನೆ ಬಗ್ಗೆಯೂ ದೂರುಗಳು ಬಂದಿವೆ. ಈ ಕುರಿತು ತನಿಖೆ ನಡೆಸಲಾಗುತ್ತದೆ' ಎಂದು ಮಹೇಂದ್ರಗಢ ಪೊಲೀಸ್ ವರಿಷ್ಠಾಧಿಕಾರಿ ಅರ್ಶ್ ವರ್ಮಾ ತಿಳಿಸಿದ್ದಾರೆ.
ಹರಿಯಾಣದ ಶಿಕ್ಷಣ ಸಚಿವ ಸೀಮಾ ತ್ರಿಕಾ ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.