ಜೆರುಸಲೇಂ: ಇಸ್ರೇಲ್-ಗಾಜಾ ನಡುವೆ ನಡೆಯುತ್ತಿರುವ ಯುದ್ಧ ಪ್ರಾರಂಭವಾಗಿ ಭಾನುವಾರಕ್ಕೆ ಸರಿಯಾಗಿ ಆರು ತಿಂಗಳು ಕಳೆದಿದೆ.
ಜೆರುಸಲೇಂ: ಇಸ್ರೇಲ್-ಗಾಜಾ ನಡುವೆ ನಡೆಯುತ್ತಿರುವ ಯುದ್ಧ ಪ್ರಾರಂಭವಾಗಿ ಭಾನುವಾರಕ್ಕೆ ಸರಿಯಾಗಿ ಆರು ತಿಂಗಳು ಕಳೆದಿದೆ.
'2023ರ ಅಕ್ಟೋಬರ್ 7ರಂದು ಗಾಜಾದ ಹಮಾಸ್ ಬಂಡುಕೋರರ ವಿರುದ್ಧ ಯುದ್ಧ ಮಾಡಲು ಇಸ್ರೇಲ್ ಪ್ರಾರಂಭಿಸಿತು. ಇಲ್ಲಿಯವರೆಗೂ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಕನಿಷ್ಠ 33,175 ಮಂದಿ ಸಾವಿಗೀಡಾಗಿದ್ದಾರೆ.
ಇಲ್ಲಿಯವರೆಗೂ ಗಾಜಾದ 32 ಸಾವಿರ ಜನರು ನಮ್ಮಿಂದ ಹತರಾಗಿದ್ದಾರೆ ಎಂದು ಇಸ್ರೇಲ್ ಕೂಡ ಹೇಳಿದೆ.
ಹಮಾಸ್ ಬಂಡುಕೋರರು ಅನಿರೀಕ್ಷಿತ ದಾಳಿ ನಡೆಸಿ ವಿದೇಶಿ ಪ್ರಜೆಗಳು ಸೇರಿದಂತೆ ಇಸ್ರೇಲ್‌ನ 1,170 ಜನರನ್ನು ಕೊಂದಿದ್ದರು. ಇದರಿಂದಾಗಿ ಉಭಯ ದೇಶಗಳ ನಡುವೆ ಯುದ್ಧ ಪ್ರಾರಂಭವಾಯಿತು. ತನ್ನ ಎಷ್ಟು ಮಂದಿ ಸದಸ್ಯರು ಹತರಾಗಿದ್ದಾರೆ ಎಂಬ ಮಾಹಿತಿ ನೀಡಲು ಇಸ್ರೇಲ್ ನಿರಾಕರಿಸಿದೆ.