ನವದೆಹಲಿ: ವಕೀಲರಾಗಿ ನೋಂದಣಿ ಮಾಡಿಕೊಳ್ಳುವ ಕಾನೂನು ಪದವೀಧರರಿಗೆ ₹600ಕ್ಕೂ ಹೆಚ್ಚು ಶುಲ್ಕ ನಿಗದಿಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ನವದೆಹಲಿ: ವಕೀಲರಾಗಿ ನೋಂದಣಿ ಮಾಡಿಕೊಳ್ಳುವ ಕಾನೂನು ಪದವೀಧರರಿಗೆ ₹600ಕ್ಕೂ ಹೆಚ್ಚು ಶುಲ್ಕ ನಿಗದಿಪಡಿಸಬಾರದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ.
ವಿವಿಧ ರಾಜ್ಯ ವಕೀಲರ ಸಂಘಗಳು ಈ ಉದ್ದೇಶಕ್ಕಾಗಿ ದುಬಾರಿ ಶುಲ್ಕ ವಸೂಲು ಮಾಡುತ್ತಿವೆ ಎಂಬುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದ ತನ್ನ ಆದೇಶವನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿತು.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಜೆ.ಬಿ.ಪಾರ್ದೀವಾಲಾ ಅವರಿದ್ದ ಪೀಠವು ದುಬಾರಿ ಶುಲ್ಕ ಪ್ರಶ್ನಿಸಿ ಸಲ್ಲಿಸಲಾಗಿದ್ದ ವಿವಿಧ 10 ಅರ್ಜಿಗಳ ವಿಚಾರಣೆಯನ್ನು ನಡೆಸಿತು.
'ವಕೀಲರ ಕಾಯ್ದೆ 1961ರ ಸೆಕ್ಷನ್ 24 ಅನ್ನು ಉಲ್ಲೇಖಿಸಿದ ಪೀಠವು, ವಕೀಲರಾಗಿ ನೋಂದಾಯಿಸಲು ಕಾನೂನು ಪದವೀಧರರಿಗೆ ₹600 ನಿಗದಿಪಡಿಸಬಹುದು. ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸಂಸತ್ತು ಮಾತ್ರ ಶುಲ್ಕ ಪರಿಷ್ಕರಿಸಬಹುದು' ಎಂದು ತಿಳಿಸಿತು.
ಭಾರತೀಯ ವಕೀಲರ ಸಂಘದ (ಬಿಸಿಐ) ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿ ವಿವಿಧ ವಕೀಲರ ವಾದಗಳನ್ನು ಪೀಠ ಆಲಿಸಿತು.