ನವದೆಹಲಿ: ಇನ್ನು ಮುಂದೆ 65 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ ಸೌಲಭ್ಯ ಪಡೆದುಕೊಳ್ಳಬಹುದು. ಆರೋಗ್ಯ ವಿಮೆ ಖರೀದಿಗೆ ನಿಗದಿ ಮಾಡಿದ್ದ 65 ವರ್ಷ ವಯೋಮಿತಿಯನ್ನು ಭಾರತೀಯ ವಿಮಾನ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ(IRDAI) ರದ್ದು ಮಾಡಿದೆ.

ಇದರೊಂದಿಗೆ 65 ವರ್ಷ ಮೇಲ್ಪಟ್ಟವರು ಕೂಡ ವಿಮೆಗೆ ಅರ್ಹತೆ ಪಡೆದುಕೊಂಡಿದ್ದಾರೆ. ವಿಮೆ ಪ್ರೀಮಿಯಂ ಮೊತ್ತ ಸ್ವಲ್ಪ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಎಲ್ಲ ವಯೋಮಾನದವರಿಗೂ ಆರೋಗ್ಯ ವಿಮೆ ನೀಡಲು ಉದ್ದೇಶಿಸಲಾಗಿದೆ. ಹಿರಿಯ ನಾಗರಿಕರು, ಮಕ್ಕಳು, ವಿದ್ಯಾರ್ಥಿಗಳು, ಮಾತೃತ್ವ ಹಾಗೂ ಇತರೆ ವರ್ಗದವರಿಗೆ ವಿಭಿನ್ನ ರೂಪದಲ್ಲಿ ಪಾಲಿಸಿಗಳನ್ನು ರೂಪಿಸುವಂತೆ ವಿಮಾ ಸಂಸ್ಥೆಗಳಿಗೆ ಸೂಚಿಸಲಾಗಿದೆ.
ಇನ್ನು ಮುಂದೆ ಐಆರ್‌ಡಿಎಐ ನಿಗದಿಪಡಿಸಿದ ಷರತ್ತುಗಳಿಗೆ ಒಳಪಟ್ಟು ವಯಸ್ಸು, ವಿಮೆ ಮೊತ್ತ ಸೇರಿದಂತೆ ಮೊದಲಾದ ಮಾನದಂಡಗಳ ಮೇಲೆ ವಿಮೆ ಪಾಲಿಸಿಗಳನ್ನು ಸಂಸ್ಥೆಗಳು ವಿನ್ಯಾಸಗೊಳಿಸುತ್ತವೆ. ಗ್ರಾಹಕ ಸ್ನೇಹಿಯಾಗಿ ವಿಮೆ ನಿಯಮ ರೂಪಿಸಲಾಗುತ್ತಿದೆ.