HEALTH TIPS

6 ಬಗೆಯ ಕಲ್ಲಂಗಡಿ ಜ್ಯೂಸ್ ರೆಸಿಪಿ: ಸಕ್ಕರೆ ಹಾಕದ ಆರೋಗ್ಯಕರ ಜ್ಯೂಸ್‌ ರೆಸಿಪಿ

Top Post Ad

Click to join Samarasasudhi Official Whatsapp Group

Qries

 ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ತುಂಬಾನೇ ಒಳ್ಳೆಯದು, ಇದನ್ನು ಹಾಗೆಯೇ ತಿಂದರೆ ಒಳ್ಳೆಯದು, ಆದರೆ ಬೇಸಿಗೆಗೆ ಜ್ಯೂಸ್‌ ಮಾಡಿ ಕುಡಿಯುವುದು ಒಳ್ಳೆಯದು, ಸಕ್ಕರೆ ಹಾಕದೆ ಕಲ್ಲಂಗಡಿ ಹಣ್ಣು ರುಚಿಕರವಾಗಿ ಮಾಡುವ 6 ಬಗೆಯ ಕಲ್ಲಂಗಡಿ ರೆಸಿಪಿ ನೀಡಿದ್ದೇವೆ ನೋಡಿ:

1. ಕಲ್ಲಂಗಡಿ ಹಣ್ಣು ಮತ್ತು ಪುದೀನಾ ರಿಫ್ರೆಶ್‌ಮೆಂಟ್ 3 ಕಪ್‌ ಕಲ್ಲಂಗಡಿ 1 ಕಪ್ ಪೈನಾಪಲ್ 1 ನಿಂಬೆರಸ 5 ಪುದೀನಾ ಎಲೆ 1 ಚಮಚ ಶುಂಠಿ

2. ಕಲ್ಲಂಗಡಿ ಹಣ್ಣು ಸೌತೆ 2 ಕಪ್‌ ನಿಂಬೆರಸ 1 ಸೌತೆ(ಸಿಪ್ಪೆ ತೆಗೆಯಿರಿ) 1 ನಿಂಬೆಹಣ್ಣು 4-5 ಪುದೀನಾ ಎಲೆ ಕಲ್ಲಂಗಡಿ, ಸೌತೆ, ಪುದೀನಾ ಹಾಕಿ ಗ್ರೈಂಡ್ ಮಾಡಿ ನಿಂಬೆರಸ ಹಿಂಡಿ, ಇದು ಕುಡಿಯಲು ರುಚಿ ದೇಹಕ್ಕೆ ತಂಪು.

3. ಕಲ್ಲಂಗಡಿ ಹಣ್ಣು ಮತ್ತು ಸೇಬು ಕಾಂಬಿನೇಷನ್ 2 ಕಪ್‌ ಕಲ್ಲಂಗಡಿ ಹಣ್ಣು, 1 ಸೇಬು ಸ್ವಲ್ಪ ಶುಂಠಿ ನಿಂಬೆರಸ ಕಲ್ಲಂಗಡಿ ಹಣ್ಣು, ಸೇಬು, ಶುಂಠಿ ಹಾಕಿ ರುಬ್ಬಿ ನಿಂಬೆರಸ ಸೇರಿಸಿ. 4. ಕಲ್ಲಂಗಡಿ ಹಣ್ಣು ಮತ್ತು ಬೀಟ್‌ರೂಟ್‌ ಅರ್ಧ ಕಲ್ಲಂಗಡಿ ಹಣ್ಣು 1 ಬೀಟ್ರೂಟ್ 1 ಸೇಬು ಸ್ವಲ್ಪ ಶುಂಠಿ 1/2 ನಿಂಬೆರಸ ಕಲ್ಲಂಗಡಿ, ಬೀಟ್ರೂಟ್, ಸೇಬು, ಶುಂಠಿ ಜ್ಯೂಸ್‌ ಮಾಡಿ ಅದಕ್ಕೆ ನಿಂಬೆರಸ ಹಿಂಡಿ ಸವಿಯಿರಿ. ಇಡೀ ದೇಹದ ಆರೋಗ್ಯಕ್ಕೆ ಶಿಲಾಜಿತ್ ಎಂಬ ಒಂದೇ ಔಷಧಿ..! ಇದರ ಲಾಭವೇನು ಗೊತ್ತಾ? 5. ಕಲ್ಲಂಗಡಿ ಮತ್ತು ದ್ರಾಕ್ಷಿ ಕಾಂಬಿನೇಷನ್ ಅರ್ಧ ಕಲ್ಲಂಗಡಿ ಹಣ್ಣು , ಬೀಜ ತೆಗೆದು ಸಿಪ್ಪೆ ಸುಲಿದ ದ್ರಾಕ್ಷಿ ಸ್ವಲ್ಪ ಶುಂಠಿ ಸ್ವಲ್ಪ ಜೇನು ಕಲ್ಲಂಗಡಿ ಹಣ್ಣು, ಶುಂಠಿ, ದ್ರಾಕ್ಷಿ ಇವುಗಳನ್ನು ಹಾಕಿ ಜ್ಯೂಸ್‌ ಮಾಡಿ ಜೇನು ಸೇರಿಸಿದರೆ ಜ್ಯೂಸ್‌ ರೆಡಿ. 6. ಕಲ್ಲಂಗಡಿ ಮತ್ತು ನಿಂಬೆರಸ ಬೇಕಾಗುವ ಸಾಮಗ್ರಿ 3 ಕಪ್‌ ಕಲ್ಲಂಗಡಿ ಹಣ್ಣು 1 ನಿಂಬೆರಸ ಸ್ವಲ್ಪ ಶುಂಠಿ ಕಲ್ಲಂಗಡಿ ಹಣ್ಣು ಮತ್ತು ಸ್ವಲ್ಪ ಶುಂಠಿ ಸೇರಿಸಿ ಜ್ಯೂಸ್‌ ಮಾಡಿ ಸ್ವಲ್ಪ ನಿಂಬೆರಸ ಸೇರಿಸಿ. ಇದೇ ಕಿವಿಹಣ್ಣು ಸೇರಿಸಿ ಕೂಡಬಹುದು, ಕಲ್ಲಂಗಡಿ ಹಣ್ಣು ಅನೇಕ ರುಚಿಯಲ್ಲಿ ಮಾಡಬಹುದು. 

ಈ ಜ್ಯೂಸ್‌ಗಳಲ್ಲಿ ಸಕ್ಕರೆ ಹಾಕದೆ ಇರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇನ್ನು ಜ್ಯೂಸ್‌ಗೆ ಐಸ್‌ ಸೇರಿಸಬಹುದು. ಕಲ್ಲಂಗಡಿ ಹಣ್ಣಿನಲ್ಲಿರುವ ಪ್ರಯೋಜನಗಳು ಕಲ್ಲಂಗಡಿ ಹಣ್ಣು ತಿನ್ನುವುದರಿಂದ ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು ಕಲ್ಲಂಗಡಿ ಹಣ್ಣಿನಲ್ಲಿ ಪೊಟಾಷ್ಯಿಯಂ ಮತ್ತ ಕ್ಯಾಲ್ಸಿಯಂ ಅಧಿಕವಿರುವುದರಿಂದ ಕಿಡ್ನಿಯ ಆರೋಗ್ಯಕ್ಕೆ ಒಳ್ಳೆಯದು. ಕಿಡ್ನಿಯು ದೇಹದಲ್ಲಿರುವ ಕಶ್ಮಲವನ್ನು ಹೊರ ಹಾಕುತ್ತದೆ. ಅಲ್ಲದೆ ಇದು ಯೂರಿಕ್ ಆಮ್ಲ ಕಡಿಮೆ ಮಾಡಲು ಸಹಕಾರಿ. ಕಲ್ಲಂಗಡಿ ಹಣ್ಣಿನಲ್ಲಿ ನೀರಿನಂಶ ಇರುವುದರಿಂದ ಮೂತ್ರ ವಿಸರ್ಜನೆ ಮೂಲಕ ಕಶ್ಮಲವನ್ನು ಹೊರ ಹಾಕಲು ಸಹಕಾರಿ.

ಕ್ಯಾನ್ಸರ್‌ ಕಣಗಳ ವಿರುದ್ಧ ಹೋರಾಡುತ್ತದೆ ಇದರಲ್ಲಿರುವ ಲೈಕೋಪೆನೆ ಅಂಶವಿರುವುದರಿಂದ ಕ್ಯಾನ್ಸರ್ ತಡೆಗಟ್ಟಲು ತುಂಬಾನೇ ಸಹಕಾರಿ. ಲೈಕೋಪನೆ ಅಂಶ ಪ್ರೊಸ್ಟೇಟ್‌, ಕರುಳು ಕ್ಯಾನ್ಸರ್, ಶ್ವಾಸ ಕೋಶದ ಕ್ಯಾನ್ಸರ್ ಈ ಬಗೆಯ ಕ್ಯಾನ್ಸರ್‌ ಕಣಗಳ ವಿರುದ್ಧ ಹೋರಾಡುತ್ತದೆ. ರಕ್ತದೊತ್ತಡ ನಿಯಂತ್ರಣದಲ್ಲಿಡುತ್ತದೆ ಕಲ್ಲಂಗಡಿ ಹಣ್ಣು ಸೇವನೆಯಿಮದ ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ. ಬೇಸಿಗೆಯಲ್ಲಿ ರಕ್ತದೊತ್ತಡ ಹೆಚ್ಚಾದರೆ ಪಾರ್ಶ್ವವಾಯು, ಹೃದಯಾಘಾತ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚು. ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಕಡಿಮೆಯಾಗುವುದು, ಕಲ್ಲಂಗಡಿ ಹಣ್ಣು ಸೇವನೆಯಿಂದ ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಪ್ರತಿದಿನ ಒಳ್ಳೆಯದು. ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು ಕಲ್ಲಂಗಡಿ ಹಣ್ಣಿನ ಸೇವನೆಯಿಂದ ಕಣ್ಣಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದರಲ್ಲಿ ವಿಟಮಿನ್‌ ಸಿ, ಬೀಟಾ ಕೆರೋಟಿನ್ , ಲ್ಯುಟಿನ್ ಇರುವುದರಿಂದ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.





Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries