ನವದೆಹಲಿ: ತಿಹಾರ್ ಜೈಲಿನಿಂದ ಹೊರಬಂದ ಸುಮಾರು 700 ಕೈದಿಗಳಿಗೆ ಉದ್ಯೋಗ ನೀಡಲಾಗಿದೆ ಮತ್ತು 1,200ಕ್ಕೂ ಹೆಚ್ಚು ಮಂದಿ ವಿವಿಧ ವಲಯಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಮಹಾ ನಿರ್ದೇಶಕ (ಕಾರಾಗೃಹ) ಸಂಜಯ್ ಬನಿವಾಲ್ ತಿಳಿಸಿದರು.
ನವದೆಹಲಿ: ತಿಹಾರ್ ಜೈಲಿನಿಂದ ಹೊರಬಂದ ಸುಮಾರು 700 ಕೈದಿಗಳಿಗೆ ಉದ್ಯೋಗ ನೀಡಲಾಗಿದೆ ಮತ್ತು 1,200ಕ್ಕೂ ಹೆಚ್ಚು ಮಂದಿ ವಿವಿಧ ವಲಯಗಳಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಮಹಾ ನಿರ್ದೇಶಕ (ಕಾರಾಗೃಹ) ಸಂಜಯ್ ಬನಿವಾಲ್ ತಿಳಿಸಿದರು.
'ಶಿಕ್ಷೆಯ ಅವಧಿ ಮುಕ್ತಾಯವಾದ ನಂತರ ಅವರು ಉದ್ಯೋಗದಲ್ಲಿರುವುದು ಕಂಡು ನನಗೆ ಸಂತೋಷವಾಗಿದೆ' ಎಂದು ಹೇಳಿದರು.
ಬನಿವಾಲ್ ಅವರನ್ನು ನವೆಂಬರ್ 2022ರಿಂದ ತಿಹಾರ್ ಜೈಲಿನ ಮಹಾ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ತಮ್ಮ ಅಧಿಕಾರ ಅವಧಿಯಲ್ಲಿ ಕೈಗೊಂಡ ಸುಧಾರಣೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, 'ನಗರಾಭಿವೃದ್ಧಿ ಸಚಿವಾಲಯದ ನೆರವಿನಿಂದ ಕಾರಾಗೃಹದಲ್ಲಿ ಕೌಶಲ ಅಭಿವೃದ್ಧಿ ಕಾರ್ಯಕ್ರಮ ಆರಂಭಿಸಿದ್ದೇವೆ. ಇದರಡಿ 700 ಕೈದಿಗಳು ಹೋಟೆಲ್ ಉದ್ಯಮದಲ್ಲಿ ಉದ್ಯೋಗ ಪಡೆದಿದ್ದಾರೆ. 1,200 ಮಂದಿ ಆಸ್ಪತ್ರೆಗಳಲ್ಲಿ ಉದ್ಯೋಗ ಮಾಡಲು ತರಬೇತಿ ಪಡೆಯುತ್ತಿದ್ದಾರೆ' ಎಂದರು.