ಇತ್ತೀಚೆಗೆ ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಈ ಸಮಸ್ಯೆ ಪುರುಷರಲ್ಲಿಯೂ ಕಂಡು ಬರುತ್ತಿದೆ. ಕೆಲವೊಂದು ಆಹಾರ ಹಾಗೂ ಪಾನೀಯಗಳು ಈ ಸಮಸ್ಯೆಯನ್ನು ಮತ್ತಷ್ಟೂ ಹೆಚ್ಚಿಸುವುದು. ಯೂರಿಕ್ ಆಮ್ಲ ಪ್ರಮಾಣ ಹೆಚ್ಚಾದರೆ ಕಿಡ್ನಿ ಸ್ಟೋನ್, ಹೃದಯ ಸಮಸ್ಯೆ ಈ ಬಗೆಯ ತೊಂದರೆ ಉಂಟಾಗುವುದು.
ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಾದರೆ ಈ ಬಗೆಯ ಲಕ್ಷಣಗಳು ದೇಹದಲ್ಲಿ ಕಂಡು ಬರುವುದು ನೋಡಿ:ಯೂರಿಕ್ ಆಮ್ಲ ಕಾಲಿನಲ್ಲಿ, ಕಾಲು ಬೆರಳುಗಳಲ್ಲಿ ಕಂಡು ಬರುವುದು
ಪುರುಷರಲ್ಲಿ ಯೂರಿಕ್ ಆಮ್ಲ ಹೆಚ್ಚಾದರೆ ಅನೇಕ ಆರೋಗ್ಯ ಸಮಸ್ಯೆ ಉಂಟು ಮಾಡುವುದು. ಆದ್ದರಿಂದ ಯೂರಿಕ್ ಆಮ್ಲ ಸಮಸ್ಯೆಯನ್ನು ಪ್ರಾರಂಭದಲ್ಲಿಯೇ ಗುರುತಿಸಿ ಅದಕ್ಕೆ ಚಿಕಿತ್ಸೆ ಪಡೆದರೆ ಇತರ ಆರೋಗ್ಯ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಬಹುದು.
ಪಾದಗಳಲ್ಲಿ ಊತ ಕಂಡು ಬರುವುದು
ಪಾದಗಳಲ್ಲಿ ಊತ, ಕಾಲುಗಳು ಕೆಂಪಾಗುವುದು ಇವೆಲ್ಲಾ ಯೂರಿಕ್ ಆಮ್ಲ ಹೆಚ್ಚಾಗಿದೆ ಎಂದು ಸೂಚಿಸುವ ಲಕ್ಷಣಗಳಿವೆ.
ಸಂಧಿ ನೋವು ಯೂರಿಕ್ ಆಮ್ಲ ಹೆಚ್ಚಾದರೆ ತುಂಬಾನೇ ಸಂಧಿನೋವು ಉಂಟಾಗುವುದು. ಕೈಗಳಲ್ಲಿ, ಪಾದಗಳಲ್ಲಿ ಸಣ್ಣ ಪುಟ್ಟ ಕೆಲಸ ಮಾಡುವಾಗ ತುಂಬಾನೇ ನೋವುಂಟಾಗುವುದು. ಈ ಬಗೆಯ ಸಮಸ್ಯೆ ರಾತ್ರಿ ಹೊತ್ತಿನಲ್ಲಿ ಹೆಚ್ಚಾಗುವುದು.
ಮರಗಟ್ಟಿದಂತೆ, ಸೂಜಿಯಿಂದ ಚುಚ್ಚಿದಂತಾಗುವುದು ಯೂರಿಕ್ ಆಮ್ಲ ಹೆಚ್ಚಾದರೆ ಕಾಲುಗಳಲ್ಲಿ, ಕೈಗಳಲ್ಲಿ, ಬೆರಳುಗಳಲ್ಲಿ ಸೂಜಿ ಚುಚ್ಚಿದಂಥ ಅನುಭವ, ಮರಗಟ್ಟಿದಂಥ ಅನುಭವ ಉಂಟಾಗುವುದು. ಈ ಬಗೆಯ ಸಮಸ್ಯೆ ಕಂಡು ಬಂದರೆ ವೈದ್ಯರನ್ನು ಕಂಡು ಅವರ ಸಲಹೆ ಪಡೆಯಿರಿ.
ದಿನನಿತ್ಯದ ಕೆಲಸ ಮಾಡಲು ತೊಂದರೆಯಾಗುವುದು ಪುರುಷರಿಗೆ ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಾದರ ನಡೆದಾಡುವಾಗ, ಸಣ್ಣ ಪುಟ್ಟ ಕೆಲಸ ಮಾಡಿದಾಗ ತೊಂದರೆ ಉಂಟಾಗುವುದು. ಸಂಧುಗಳಲ್ಲಿ ಊತ , ನೋವು ಕೂಡ ಯೂರಿಕ್ ಆಮ್ಲದ ಲಕ್ಷಣವಾಗಿದೆ.
ತ್ವಚೆಯಲ್ಲಿ ಬದಲಾವಣೆ ತ್ವಚೆ ಕೆಂಪಾಗುವುದು, ತುರಿಕೆ, ತ್ವಚೆಯಲ್ಲಿ ಗಡ್ಡೆಯಂತಾಗುವುದು ಈ ಬಗೆಯ ಲಕ್ಷಣಗಳು ಕಂಡು ಬಂದರೆ ನಿಮಗೆ ಆರೋಗ್ಯ ಸಮಸ್ಯೆಯಿದೆ ಎಂದರ್ಥ.
ರಾತ್ರಿ ಹೊತ್ತಿನಲ್ಲಿ ಅಸ್ವಸ್ಥತೆ ಹಾಗೂ ಸುಸ್ತು ರಾತ್ರಿ ಹೊತ್ತಿನಲ್ಲಿ ತುಂಬಾನೇ ಅಸ್ವಸ್ಥತೆ, ಸುಸ್ತು ಈ ಬಗೆಯ ಸಮಸ್ಯೆ ಕಂಡು ಬರುವುದು, ಒಳ್ಳೆಯ ನಿದ್ದೆ ಮಾಡಲು ಸಾಧ್ಯವಾಗಲ್ಲ, ಹಗಲಿನಲ್ಲಿಯೂ ಹೆಚ್ಚು ಲವಲವಿಕೆಯಿಮದ ಇರಲು ಸಾಧ್ಯವಾಗುವುದಿಲ್ಲ.
ಈ ಯೂರಿಕ್ ಆಮ್ಲ ಸಮಸ್ಯೆ ಉಂಟಾದರೆ ನೀವು ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯಬೇಕು. ಜೊತೆಗೆ ಈ ರೀತಿ ಮಾಡುವುದರಿಂದ ಯೂರಿಕ್ ಆಮ್ಲ ಸಮಸ್ಯೆ ಕಡಿಮೆ ಮಾಡಬಹುದು
ಸಾಕಷ್ಟು ನೀರು ಕುಡಿಯಿರಿ ಸಾಕಷ್ಟು ನೀರು ಕುಡಿಯುವುದರಿಂದ ಅನಗ್ಯತ ಯೂರಿಕ್ ಆಮ್ಲವನ್ನು ದೇಹದಿಂದ ಹೊರಕ್ಕೆ ಹಾಕಲು ಸಹಕಾರಿ. ದಿನದಲ್ಲಿ 8-10 ಲೋಟ ನೀರು ಕುಡಿಯಿರಿ.
ಪ್ಯೂರಿನೆ ಕಡಿಮೆ ಇರುವ ಆಹಾರಕ್ರಮ ಪಾಲಿಸಿ ನೀವು ಸಮುದ್ರಾಹಾರ, ಮದ್ಯ ಹೀಗೆ ಕೆಲವೊಂದು ಆಹಾರ ನಿಯಂತ್ರಿಸಬೇಕು.
ತೂಕ ನಿಯಂತ್ರಣದಲ್ಲಿಡಿ ಅತ್ಯಧಿಕ ಮೈ ತೂಕ ಕೂಡ ಯೂರಿಕ್ ಆಮ್ಲ ಸಮಸ್ಯೆ ಹೆಚ್ಚಿಸುವುದು. ಮೈ ತೂಕ ನಿಯಂತ್ರಿಸಲು ಪ್ರತಿದಿನ ವ್ಯಾಯಾಮ ಮಾಡಿ.
ಸಕ್ಕರೆ ಪದಾರ್ಥ ಸೇವಿಸಬೇಡಿ ಸಕ್ಕರೆಯಂಶ ಸಂಪೂರ್ಣ ಬಿಟ್ಟರೆ ಒಳ್ಳೆಯದು ಇದರಿಂದ ಯೂರಿಕ್ ಆಮ್ಲ ಸಮಸ್ಯೆ ಕಡಿಮೆಯಾಗುವುದು.