HEALTH TIPS

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: 800 ನಿವಾಸಿಗಳ ಸ್ಥಳಾಂತರ

Top Post Ad

Click to join Samarasasudhi Official Whatsapp Group

Qries

 ಕಾರ್ತಾ: ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದ್ದು, ಪರ್ವತದ ತಪ್ಪಲಲಿದ್ದ ಕನಿಷ್ಠ 800 ನಿವಾಸಿಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಉತ್ತರ ಸುಲವೆಸಿ ಪ್ರಾಂತ್ಯದ ದ್ವೀಪದಲ್ಲಿ ಬುಧವಾರ ಜ್ವಾಲಾಮುಖಿ ಸ್ಫೋಟಿಸಿದೆ.

ಲಾವಾ ಹಾಗೂ ಬಿಸಿ ಬೂದಿ 3 ಕಿ.ಮೀ (ಎರಡು ಮೈಲುಗಳು) ಎತ್ತರಕ್ಕೆ ಚಿಮ್ಮಿದೆ. ಸ್ಫೋಟದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.


ಈವರೆಗೆ ಸುಮಾರು 800ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಪರ್ವತಕ್ಕೆ ಸಮುದ್ರ ಹೊಂದಿಕೊಂಡಿರುವ ಕಾರಣ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಇಲ್ಲಿನ ಆಡಳಿತ ಎಚ್ಚರಿಕೆ ನೀಡಿದೆ. ಹಾಗಾಗಿ ಪ್ರಾಂತೀಯ ರಾಜಧಾನಿ ಮನಾಡೋದಲ್ಲಿ ವಿಮಾನ ನಿಲ್ದಾಣವನ್ನು ಬಂದ್‌ ಮಾಡಲಾಗಿದೆ.

ಸುರಕ್ಷತಾ ಹಿನ್ನೆಲೆ ವಾಯುಯಾನ ಅಧಿಕಾರಿಗಳು ಎಚ್ಚರಿಕೆ ನೀಡಿದ ಬಳಿಕ ಪೂರ್ವ ಮಲೇಷ್ಯಾ ಮತ್ತು ಬ್ರೂನಿಯಲ್ಲಿ 9 ವಿಮಾನಗಳನ್ನು ರದ್ದುಗೊಳಿಸಲಾಗಿದೆ.

'ಹೆಚ್ಚಿನ ಅಪಾಯದ ಪ್ರದೇಶಗಳಲ್ಲಿರುವ ಸುಮಾರು 1,500 ಜನರನ್ನು ತಕ್ಷಣವೇ ಸ್ಥಳಾಂತರಿಸುವ ಅಗತ್ಯವಿದೆ' ಎಂದು ವಿಪತ್ತು ನಿರ್ವಹಣಾ ಏಜೆನ್ಸಿಯ ವಕ್ತಾರ ಅಬ್ದುಲ್ ಮುಹಾರಿ ಹೇಳಿದ್ದಾರೆ. ಅಲ್ಲದೇ ತಗುಲಂಡಂಗ್‌ ದ್ವೀಪದಲ್ಲಿರುವ 12,000 ಜನರನ್ನು ಸ್ಥಳಾಂತರ ಮಾಡುವಂತೆ, ಪರ್ವತದಿಂದ 6 ಕಿ.ಮೀ.ದೂರದಲ್ಲಿರುವಂತೆ ತಿಳಿಸಲಾಗಿದೆ.

ಇಂಡೋನೇಷ್ಯಾದಲ್ಲಿ 1871 ರಲ್ಲಿ ಜ್ವಾಲಾಮುಖಿ ಸ್ಪೋಟದಿಂದ ಉಂಟಾದ ಸುನಾಮಿಯಲ್ಲಿ ಸುಮಾರು 400 ಜನರು ಮೃತಪಟ್ಟಿದ್ದರು.

Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries