ತಿರುವನಂತಪುರ: ದೇಶದಲ್ಲಿ ಇದೇ ಮೊದಲ ಬಾರಿಗೆ, ಕೇರಳದ 80 ಸಾವಿರ ಶಿಕ್ಷಕರು ಎಐ ತಂತ್ರಜ್ಞಾನದ ಬಗ್ಗೆ ತರಬೇತಿ ಪಡೆಯಲು ಸಜ್ಜಾಗಿದ್ದಾರೆ.
ತಿರುವನಂತಪುರ: ದೇಶದಲ್ಲಿ ಇದೇ ಮೊದಲ ಬಾರಿಗೆ, ಕೇರಳದ 80 ಸಾವಿರ ಶಿಕ್ಷಕರು ಎಐ ತಂತ್ರಜ್ಞಾನದ ಬಗ್ಗೆ ತರಬೇತಿ ಪಡೆಯಲು ಸಜ್ಜಾಗಿದ್ದಾರೆ.
'ಮೇ 2ರಿಂದ 3 ದಿನಗಳ ಕಾಲ ಕೇರಳದ ಶೈಕ್ಷಣಿಕ ಮೂಲಸೌಲಭ್ಯ ಮತ್ತು ತಂತ್ರಜ್ಞಾನ (ಕೆಐಟಿಇ) ಸಂಸ್ಥೆಯ ವತಿಯಿಂದ ತರಬೇತಿ ನಡೆಯಲಿದ್ದು, 8ರಿಂದ 12ನೇ ತರಗತಿವರೆಗಿನ 80,000 ಶಿಕ್ಷಕರು ಆಗಸ್ಟ್ ತಿಂಗಳೊಳಗಾಗಿ ಎಐ ಪರಿಣತಿ ಪಡೆಯಬೇಕೆಂಬ ಗುರಿಯನ್ನು ಹೊಂದಲಾಗಿದೆ' ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
'ಪಿಡಿಎಫ್, ಚಿತ್ರ ಮತ್ತು ದೃಶ್ಯ ರೂಪದಲ್ಲಿರುವ ಕ್ಲಿಷ್ಟ ದಾಖಲೆಗಳನ್ನು ಸರಳೀಕರಣಗೊಳಿಸುವ, ಮಹತ್ವದ ಮಾಹಿತಿಗಳನ್ನು ಸಂರಕ್ಷಿಸುವ ಮತ್ತು ಎಐ ಟೂಲ್‌ಗಳ ಮೂಲಕ ಹೊಸ ಮಾಹಿತಿಗಳನ್ನು ಸೃಷ್ಟಿಸುವ ಕಾರ್ಯತಂತ್ರ ಕಲಿಸಿಕೊಡುವುದು ಈ ತರಬೇತಿಯ ಉದ್ದೇಶ' ಎಂದು ಕೆಐಟಿಇ ಸೋಮವಾರ ಮಾಹಿತಿ ನೀಡಿದೆ.
'ಪ್ರತಿಯೊಬ್ಬ ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಮತ್ತು ಅಂಗವಿಕಲ ವಿದ್ಯಾರ್ಥಿಗಳಿಗೆ ಬೇಕಾದ ಸಂಪನ್ಮೂಲವನ್ನು ರೂಪಿಸಲು ಎಐ ಕುರಿತಾದ ತರಬೇತಿ ಸಹಾಯಕವಾಗುತ್ತದೆ' ಎಂದು ಕೆಐಟಿಇ ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ.ಅನ್ವರ್ ಸಾದತ್ ತಿಳಿಸಿದರು.