ವಾಷಿಂಗ್ಟನ್: ಇಸ್ರೇಲ್ ವಿರುದ್ಧ ಇರಾನ್ ಉಡಾಯಿಸಿದ್ದ 80ಕ್ಕೂ ಅಧಿಕ ಮಾನವರಹಿತ ವೈಮಾನಿಕ ವಾಹನಗಳು ಹಾಗೂ ಕನಿಷ್ಠ 6 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ನಾಶ ಮಾಡಿದ್ದಾಗಿ ಅಮೆರಿಕ ಭಾನುವಾರ ತಿಳಿಸಿದೆ.
ಇದರಲ್ಲಿ ಉಡಾವಣಾ ವಾಹನದಲ್ಲಿದ್ದ ಒಂದು ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಹುತಿ ಬಂಡುಕೋರರ ವಶದಲ್ಲಿರುವ ಯೆಮನ್‌ನ ಪ್ರದೇಶದಲ್ಲಿ ಉಡಾವಣೆಗೂ ಮುನ್ನವೇ ನಾಶಪಡಿಸಲಾದ 7 ಮಾನವರಹಿತ ವೈಮಾನಿಕ ವಾಹನಗಳೂ ಸೇರಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ತಿಳಿಸಿದೆ.
ಸಿರಿಯಾದಲ್ಲಿರುವ ಇರಾನ್ ರಾಯಭಾರ ಕಚೇರಿಯ ಮೇಲೆ ಇಸ್ರೇಲ್ ಏ.1ರಂದು ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರವಾಗಿ ಇರಾನ್ ಇಸ್ರೇಲ್ ಮೇಲೆ 300ಕ್ಕೂ ಅಧಿಕದ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿತ್ತು.
ಇರಾನ್ ಹಾರಿಸಿದ್ದ ಎಲ್ಲಾ ಡ್ರೋನ್ ಹಾಗೂ ಕ್ಷಿಪಣಿಗಳನ್ನು ಭೂಮಿಗೆ ತಲುಪುವ ಮೊದಲೇ ಇಸ್ರೇಲ್, ಅಮೆರಿಕ ಹಾಗೂ ಮಿತ್ರಪಡೆಗಳು ಹೊಡೆದುರಳಿಸಿತ್ತು.