ತಿರುವನಂತಪುರಂ: ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅರ್ಜಿ ಸಲ್ಲಿಸಿದವರಲ್ಲಿ ಶೇ.81ರಷ್ಟು ಮಂದಿ ಮತ ಚಲಾಯಿಸಿದ್ದಾರೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ತಿಳಿಸಿದ್ದಾರೆ. ರಾಜ್ಯದಲ್ಲಿ ಇದುವರೆಗೆ 1,42,799 ಮಂದಿ ಮನೆಯಲ್ಲೇ ಮತದಾನ ಮಾಡಿದ್ದಾರೆ.
ಇದರಲ್ಲಿ 85 ವರ್ಷ ಮೇಲ್ಪಟ್ಟ 1,02,285 ವ್ಯಕ್ತಿಗಳು ಮತ್ತು 40,514 ವಿಕಲಚೇತನರು ಸೇರಿದ್ದಾರೆ. ಇದೇ ತಿಂಗಳ 25ರವರೆಗೆ ಮನೆಯಲ್ಲಿ ಮತದಾನ ನಡೆಯಲಿದೆ.
ಪೋಲೀಸ್, ಮೈಕ್ರೋ ಅಬ್ಸರ್ವರ್, ವೀಡಿಯೋಗ್ರಾಫರ್ ಮತ್ತು ಮತಗಟ್ಟೆ ಅಧಿಕಾರಿಗಳನ್ನೊಳಗೊಂಡ ತಂಡವು ಮತಗಳನ್ನು ನೋಂದಾಯಿಸಲು ಮನೆ ಮನೆಗಳಿಗೆ ತೆರಳುತ್ತದೆ. ನೋಂದಾಯಿತ ಮತಪತ್ರಗಳನ್ನು ಸೀಲ್ ಮಾಡಿ ಲೋಹದ ಪೆಟ್ಟಿಗೆಗಳಲ್ಲಿ ಇರಿಸಿ ನಂತರ ಸ್ಟ್ರಾಂಗ್ ರೂಮ್‍ಗಳಲ್ಲಿ ಇಡಲಾಗುತ್ತದೆ.