ಬಹುತೇಕ ಜನರಿಗೆ ಒಮ್ಮೆ ಮಾಡಿದ ಆಹಾರವನ್ನು ಮತ್ತೆ ಬಿಸಿ ಮಾಡಿ ಸೇವಿಸುವ ಅಭ್ಯಾಸ ಇರುತ್ತದೆ. ಆದರೆ, ಇದು ಕೆಲವೊಮ್ಮೆ ನಿಮ್ಮ ಆರೋಗ್ಯಕ್ಕೆ ತೊಂದರೆಯನ್ನು ಉಂಟುಮಾಡಬಹುದು. ಕೆಲವು ಆಹಾರಗಳನ್ನು ಪದೇಪದೆ ಬಿಸಿ ಮಾಡುವುದರಿಂದ ಅದರಲ್ಲಿನ ಪೌಷ್ಟಿಕಾಂಶಗಳು ಕಡಿಮೆ ಆಗುತ್ತದೆ.
ಕೆಲವು ಜನರು ಒಂದು ಬಾರಿ ಮಾಡಿದ ಅಡುಗೆಯನ್ನು (Cooking) ಬಿಸಿ ಮಾಡಿ ಮರುದಿನವೂ ಉಪಯೋಗಿಸುತ್ತಾರೆ. ಅಥವಾ ತಣ್ಣಗಾಗಿದೆ ಎಂದು ಮತ್ತೆ ಮತ್ತೆ ಬಿಸಿ ಮಾಡುತ್ತಾರೆ. ಕೆಲವು ತರಕಾರಿಗಳು, ಆಹಾರಗಳನ್ನು ಈ ರೀತಿ ಪದೇಪದೆ ಬಿಸಿ ಮಾಡುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ ಎಂಬುದು ನಿಮಗೆ ತಿಳಿದಿರುವುದು ಉತ್ತಮ. ಅಂತಹ ಕೆಲವು ಆಹಾರಗಳ ಬಗ್ಗೆ ಮಾಹಿತಿ ಇಲ್ಲಿದೆ.
ಆಲೂಗಡ್ಡೆ:
ಆಲೂಗಡ್ಡೆಗಳನ್ನು ಸಂಗ್ರಹಿಸಲು, ಮತ್ತೆ ಬಿಸಿ ಮಾಡಿ ಸೇವಿಸಲು ತುಂಬಾ ಸುಲಭ. ಆದರೆ, ಇದನ್ನು ಮತ್ತೆ ಬಿಸಿ ಮಾಡಿದರೆ ಅದು ಕ್ಲೋಸ್ಟ್ರಿಡಿಯಮ್ ಬೊಟುಲಿನಮ್ ಅನ್ನು ಉತ್ಪಾದಿಸಬಹುದು. ಇದು ಬೊಟುಲಿಸಮ್ ಅನ್ನು ಉಂಟುಮಾಡುವ ಬ್ಯಾಕ್ಟೀರಿಯವಾಗಿದ್ದು, ನಿಮ್ಮ ದೇಹದ ನರಗಳ ಮೇಲೆ ದಾಳಿ ಮಾಡುತ್ತದೆ.
ಚಹಾ:
ಒಮ್ಮೆ ಮಾಡಿಟ್ಟ ಟೀಯನ್ನು ಮತ್ತೆ ಬಿಸಿ ಮಾಡಿ ಕುಡಿಯುವುದು ಒಳ್ಳೆಯದಲ್ಲ. ಚಹಾವನ್ನು ಕುದಿಸಿದಾಗ ಇದು ಟ್ಯಾನಿನ್‌ಗಳು ಮತ್ತು ಕ್ಯಾಟೆಚಿನ್‌ಗಳಂತಹ ವಿವಿಧ ಸಂಯುಕ್ತಗಳನ್ನು ಬಿಡುಗಡೆ ಮಾಡುತ್ತದೆ. ಅವುಗಳನ್ನು ಮತ್ತೆ ಬಿಸಿ ಮಾಡುವುದರಿಂದ ಹಾಳಾಗುತ್ತದೆ. ಇದರಿಂದ ಚಹಾದ ಸುವಾಸನೆ ಕಡಿಮೆಯಾಗುತ್ತದೆ.
ಸೊಪ್ಪು:
ಬೇಯಿಸಿದ ಪಾಲಕ್ ಸೊಪ್ಪನ್ನು ಮತ್ತೆ ಬಿಸಿ ಮಾಡಬಾರದು. ಏಕೆಂದರೆ ಇದು ಹೆಚ್ಚಿನ ಮಟ್ಟದ ನೈಟ್ರೇಟ್‌ಗಳನ್ನು ಹೊಂದಿರುತ್ತದೆ. ಇದು ಮತ್ತೆ ಬಿಸಿ ಮಾಡಿದಾಗ ಹಾನಿಕಾರಕ ನೈಟ್ರೈಟ್‌ಗಳಾಗಿ ಬದಲಾಗುತ್ತದೆ. ಇವುಗಳು ವಿಶೇಷವಾಗಿ ಚಿಕ್ಕ ಮಕ್ಕಳು ಮತ್ತು ಗರ್ಭಿಣಿಯರಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ.
ಅಡುಗೆ ಎಣ್ಣೆ:
ಅಡುಗೆ ಎಣ್ಣೆಯನ್ನು ಮತ್ತೆ ಬಿಸಿ ಮಾಡುವುದರಿಂದ ಅದು ಹೆಚ್ಚು ಕಾರ್ಸಿನೋಜೆನಿಕ್ ಆಗುತ್ತದೆ. ಇದು ಬೊಜ್ಜು, ಹೃದ್ರೋಗ ಮತ್ತು ಮಧುಮೇಹಕ್ಕೆ ಕಾರಣವಾಗುವ ಉರಿಯೂತವನ್ನು ಉಂಟುಮಾಡುತ್ತದೆ. ಹೆಚ್ಚು ಎಣ್ಣೆಯನ್ನು ಪುನಃ ಕಾಯಿಸಿದಷ್ಟೂ ಅದು ವಿಷಕಾರಿ ಮತ್ತು ಕಾರ್ಸಿನೋಜೆನಿಕ್ ಆಗುತ್ತದೆ ಮತ್ತು ಕಾಲಕ್ರಮೇಣ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಬೀಟ್ರೂಟ್:
ಬೀಟ್ರೂಟ್ಗಳನ್ನು ನಿರಂತರವಾಗಿ ಬಿಸಿ ಮಾಡಿದಾಗ ಬಹಳಷ್ಟು ಹಾನಿಯಾಗುತ್ತದೆ. ನೈಟ್ರೇಟ್‌ಗಳು ನಂತರ ನೈಟ್ರೈಟ್‌ಗಳಾಗಿ ಪರಿವರ್ತನೆಗೊಳ್ಳುತ್ತವೆ. ಇದು ಮುಂದೆ ನೈಟ್ರೊಸಮೈನ್‌ಗಳಾಗಿ ಮಾರ್ಪಡುತ್ತದೆ.
ಅಣಬೆಗಳು:
ಅಣಬೆಗಳು ಪ್ರೊಟೀನ್‌ನ ಸಮೃದ್ಧ ಮೂಲವಾಗಿದ್ದು, ಅದನ್ನು ಮತ್ತೆ ಬಿಸಿ ಮಾಡುವುದರಿಂದ ಒಡೆಯಬಹುದು. ಈ ವಿಷಗಳು ಹೊಟ್ಟೆಯ ತೊಂದರೆಗೆ ಕಾರಣವಾಗಬಹುದು ಮತ್ತು ತೀವ್ರವಾದ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಅಕ್ಕಿ:
ರೀಹೀಟೆಡ್ ರೈಸ್ ಸಿಂಡ್ರೋಮ್ ಬ್ಯಾಸಿಲಸ್ ಸೆರಿಯಸ್‌ನಿಂದ ಉಂಟಾಗುವ ಆಹಾರ ವಿಷವಾಗಿದೆ. ಸರಿಯಾಗಿ ತಂಪಾಗುವ ಪಿಷ್ಟಗಳಲ್ಲಿ ಹರಡುವ ಬ್ಯಾಕ್ಟೀರಿಯಾ ಇದಾಗಿದೆ. ಒಂದೆರಡು ಗಂಟೆಗಳಿಗಿಂತ ಹೆಚ್ಚು ಕಾಲ ಕೋಣೆಯ ಉಷ್ಣಾಂಶದಲ್ಲಿ ಇಟ್ಟ ಅಕ್ಕಿ ಮತ್ತು ಇತರ ಪಿಷ್ಟ ಆಹಾರಗಳನ್ನು ಬಳಸಬೇಡಿ.
ಬ್ರೊಕೊಲಿ:
ಬೇಯಿಸಿದಾಗ ಮತ್ತು ಮತ್ತೆ ಬಿಸಿ ಮಾಡಿದಾಗ ಬ್ರೊಕೊಲಿಯು ಅದರ ಕೆಲವು ವಿಟಮಿನ್ ಸಿ ಮತ್ತು ಫೋಲೇಟ್ ಅನ್ನು ಕಳೆದುಕೊಳ್ಳುತ್ತದೆ.