ಕಾಸರಗೋಡು: ಕಲ್ಯಾಶ್ಸೆರಿ ಪರಕ್ಕಡವ್‍ನಲ್ಲಿ 92 ವರ್ಷದ ಮಹಿಳೆಯೊಬ್ಬರ ಮತವನ್ನು ಸಿಪಿಎಂ ಮುಖಂಡರೊಬ್ಬರು ದಾಖಲಿಸಿದ್ದಾರೆ ಎಂದು ದೂರಲಾಗಿದ್ದು, ಸಾಮಾಜಿಕ ಜಾಲತಾಣದಲ್ಲೂ ದೃಶ್ಯಗಳು ಹರಿದಾಡಿದೆ. 85 ವರ್ಷ ಮೇಲ್ಪಟ್ಟವರು ಮನೆಯಲ್ಲಿಯೇ ಮತದಾನ ಮಾಡುವ ಸೌಲಭ್ಯದ ಅಂಗವಾಗಿ 92 ರ ಹರೆಯದ ದೇವಿ ಎಂಬ ಮಹಿಳೆಯಿಂದ ಅಧಿಕಾರಿಗಳು ಮತ ಚಲಾಯಿಸಲು ಬಂದಿದ್ದರು. ಆದರೆ ಸಿಪಿಎಂ ನಾಯಕ ಅವರ ಪರವಾಗಿ ಮತ ಚಲಾಯಿಸಿದರು.
ಕಲ್ಯಾಶ್ಸೆರಿ ಸಿಪಿಎಂನ ಶಾಖಾ ಮಾಜಿ ಕಾರ್ಯದರ್ಶಿ ಹಾಗೂ ಬೂತ್ ಏಜೆಂಟ್ ಗಣನ್ ಮತ ಚಲಾಯಿಸಿದ್ದಾರೆ ಎಂಬುದು ದೂರು. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿವೆ. ಘಟನೆಯಲ್ಲಿ ವಿಶೇಷ ಮತಗಟ್ಟೆ ಅಧಿಕಾರಿ, ಪೋಲಿಂಗ್ ಅಸಿಸ್ಟೆಂಟ್ ಮೈಕ್ರೋ ಅಬ್ಸರ್ವರ್, ಸ್ಪೆಷಲ್ ಪೋಲೀಸ್ ಅಧಿಕಾರಿ, ವಿಡಿಯೋಗ್ರಾಫರ್ ಮುಂತಾದವರಿದ್ದು, ಚುನಾವಣಾಧಿಕಾರಿಗಳಾದ ಕಣ್ಣೂರು ಜಿಲ್ಲಾಧಿಕಾರಿ ಅರುಣ್ ಕೆ. ವಿಜಯನ್ ಅವರನ್ನೆಲ್ಲ ಅಮಾನತುಗೊಳಿಸಿರುವರು.
ತನಿಖೆ ನಡೆಸಿ ಇಲಾಖಾ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಕಾನೂನು ಮತ್ತು ಚುನಾವಣಾ ತಂಡದ ವಿರುದ್ಧ ಕ್ರಿಮಿನಲ್ ಕ್ರಮ ಜರುಗಿಸುವಂತೆ ಕಲ್ಯಾಶ್ಸೆರಿ ಉಪಚುನಾವÀಣಾಧಿಕಾರಿ ಅವರು ನಗರ ಪೋಲೀಸ್ ಆಯುಕ್ತರ ಮೂಲಕ ಕಣ್ಣಪುರಂ ಪೆÇಲೀಸ್ ಠಾಣೆಗೆ ಅಧಿಕೃತವಾಗಿ ವರದಿ ಸಲ್ಲಿಸಿದ್ದಾರೆ.