ನವದೆಹಲಿ: ಜಂಟಿ ಕಾರ್ಯಪಡೆಯ ಸಹಯೋಗದಲ್ಲಿ ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ 940 ಕಿಲೋ ಗ್ರಾಂ ತೂಕದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ನವದೆಹಲಿ: ಜಂಟಿ ಕಾರ್ಯಪಡೆಯ ಸಹಯೋಗದಲ್ಲಿ ಭಾರತೀಯ ನೌಕಾಪಡೆಯು ಅರಬ್ಬಿ ಸಮುದ್ರದಲ್ಲಿ 940 ಕಿಲೋ ಗ್ರಾಂ ತೂಕದ ಮಾದಕ ವಸ್ತುಗಳನ್ನು ಜಪ್ತಿ ಮಾಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
'ಕ್ರಿಮ್ಸನ್ ಬರ್ರಕುಡಾ' ಹೆಸರಿನ ಕಾರ್ಯಾಚರಣೆಯ ಭಾಗವಾಗಿ ಐಎನ್‌ಎಸ್ ತಲ್ವಾರ್ ಹಡಗಿನೊಂದಿಗೆ ಸಮುದ್ರಕ್ಕಿಳಿದಿದ್ದ ಭಾರತೀಯ ನೌಕಾಪಡೆಯ ಕಮಾಂಡೊಗಳು ಸಣ್ಣ ಹಡಗೊಂದರಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮಾದಕವಸ್ತುಗಳನ್ನು ಜಪ್ತಿ ಮಾಡಿದ್ದಾರೆ' ಎಂದು ನೌಕಾಪಡೆಯ ವಕ್ತಾರರು ತಿಳಿಸಿದ್ದಾರೆ.