HEALTH TIPS

ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳ ನಿಯಂತ್ರಣ, ತಡೆಗಟ್ಟುವಿಕೆಗೆ AI ತಂತ್ರಜ್ಞಾನ

 ವದೆಹಲಿ: ಮಧುಮೇಹದಂತಹ ಜೀವನಶೈಲಿ ಕಾಯಿಲೆಗಳಿಗೆ ಪರಿಹಾರ ಕಂಡುಕೊಳ್ಳಲು ತಜ್ಞರು ಕೃತಕ ಬುದ್ದಿಮತ್ತೆ (ಎಐ) ಮೊರೆ ಹೋಗಿದ್ದು ದೆಹಲಿ ಮೂಲದ TWIN Health ಆ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ.

TWIN Health's Whole Body Digital Twin technology ಎಂಬ ಕ್ರಮದ ಮೂಲಕ ಮಧುಮೇಹ ಹಾಗೂ ಇತರೆ ಜಿರ್ಣಾಂಗವ್ಯೂಹಗಳಿಗೆ ಸಂಬಂಧಿಸಿದ ಕಾಯಿಲೆಗಳ ಮೇಲೆ ಸಂಪೂರ್ಣ ನಿಗಾ ವಹಿಸಬಹುದು ಮತ್ತು ಅವುಗಳನ್ನು ತಡೆಗಟ್ಟಬಹುದು ಎಂದು ತಜ್ಞರು ಹೇಳಿದ್ದಾರೆ.

'ದೀರ್ಘಕಾಲದ ಚಯಾಪಚಯ ರೋಗಗಳನ್ನು ನಿರ್ವಹಿಸಲು ಮತ್ತು ಹಿಮ್ಮೆಟ್ಟಿಸಲು ವ್ಯಕ್ತಿಯ ಬಗೆಗಿನ ಪೌಷ್ಟಿಕಾಂಶ, ನಿದ್ರೆ, ಚಟುವಟಿಕೆ ಮತ್ತು ಉಸಿರಾಟದ ಬಗ್ಗೆ ವೈಯಕ್ತಿಕರಣಗೊಳಿಸಿದ ಅಂಶಗಳೊಂದಿಗೆ (ಕಸ್ಟಮೈಸ್ಡ್) ನಿಖರವಾದ ಮಾರ್ಗದರ್ಶನ ನೀಡಲು ಕೃತಕ ಬುದ್ದಿಮತ್ತೆ ತಂತ್ರಜ್ಞಾನ ಬಳಸಿಕೊಳ್ಳಲಾಗಿದೆ. ಇದನ್ನು ವೈಜ್ಞಾನಿಕವಾಗಿ ದೃಢಿಕರಿಸಿಕೊಳ್ಳಲಾಗಿದೆ' ಎಂದು ದೆಹಲಿಯ ಗಂಗಾರಾಮ್ ಆಸ್ಪತ್ರೆಯ ವೈದ್ಯ ಮೋಹ್ಸಿನ್ ವಾಲಿ ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ವೆಬ್ ಮತ್ತು ಆಯಪ್ ಮೂಲಕ TWIN Health ಕೆಲಸ ಮಾಡಲಿದೆ. ಡಯಾಬಿಟೀಸ್ ಹಿನ್ನೆಲೆಯಲ್ಲಿ ಇಡೀ ದೇಹದ ಮೇಲೆ ನಿಗಾ ಇಡುವುದು ಇದರಿಂದ ಸಾಧ್ಯವಾಗಲಿದೆ. ಇದು ಕ್ರಾಂತಿಕಾರಕ ಹೆಜ್ಜೆ ಎಂದು ತಿಳಿಸಿದ್ದಾರೆ.

ಎಐ ತಂತ್ರಜ್ಞಾನದ ಮೂಲಕ ಡಯಾಬಿಟೀಸ್ ಉಪಶಮನ ಹಾಗೂ ರಿವರ್ಸ್ ಮಾಡಲು ಕ್ಲಿನಿಕಲ್ ಪರೀಕ್ಷೆಗಳನ್ನು ಯಶಸ್ವಿಗೊಳಿಸಲಾಗಿದೆ ಎಂದು TWIN Healthನ ವಿಜ್ಞಾನಿ ಡಾ. ಶಶಾಂಕ್ ಜೋಶಿ ತಿಳಿಸಿದ್ದಾರೆ.

ಇದು ಕೇವಲ ಡಯಾಬಿಟೀಸ್ ಮಾತ್ರವಲ್ಲದೇ ವ್ಯಕ್ತಿಯ ಒಟ್ಟು ಆರೋಗ್ಯದ ಶ್ರೇಯೋಭಿವೃದ್ಧಿಗೆ ಸಹಾಯ ಮಾಡಲಿದೆ. TWIN Health ವೆಬ್‌ಸೈಟ್ ಅಥವಾ ಆಯಪ್ ಮೂಲಕ ಲಾಗಿನ್ ಆಗಿ ಇದರ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries