HEALTH TIPS

'ದೇಶ ಸೇವೆಯ ನೆಪ ಕೊಡಬೇಡಿ': Baba Ramdev ಗೆ ಸುಪ್ರೀಂ ಕೋರ್ಟ್ ಛೀಮಾರಿ; ಕೈ ಮುಗಿದು ಕ್ಷಮೆ ಕೋರಿದ ಯೋಗ ಗುರು!

          ನವದೆಹಲಿ: ಪತಂಜಲಿ ಉತ್ಪನ್ನಗಳ ದಾರಿತಪ್ಪಿಸುವ ಜಾಹಿರಾತು ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಯೋಗ ಗುರು ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಅವರಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿ, ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿದೆ.

           ಪತಂಜಲಿ ಸಂಸ್ಥೆಯ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತಿನ ಪ್ರಕರಣದಲ್ಲಿ, ಯೋಗ ಗುರು ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ (MD) ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಕೆ ಮಾಡಿದ್ದ ಅಸ್ಪಷ್ಟ ಮತ್ತು ಅಸಂಬದ್ಧ ಅಫಿಡವಿಟ್ ಗೆ ಕೆಂಡಾಮಂಡಲವಾಗಿರುವ ಸುಪ್ರೀಂ ಕೋರ್ಟ್‌ ಇಬ್ಬರಿಗೂ ಛೀಮಾರಿ ಹಾಕಿದೆ. ಈ ವೇಳೆ ಬಾಬಾ ರಾಮ್ ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಕೋರ್ಟ್ ಗೆ ಹಾಜರಾಗಿ ತಮ್ಮ ನಡವಳಿಕೆಗಾಗಿ ಕ್ಷಮೆಯಾಚಿಸಿದ್ದಾರೆ.


            ಪತಂಜಲಿ ಸಂಸ್ಥೆಯ ಉತ್ಪನ್ನಗಳ ದಾರಿತಪ್ಪಿಸುವ ಜಾಹೀರಾತಿನ ಪ್ರಕರಣದಲ್ಲಿ ಯೋಗ ಗುರು ರಾಮ್‌ದೇವ್ ಮತ್ತು ಪತಂಜಲಿ ಆಯುರ್ವೇದ ವ್ಯವಸ್ಥಾಪಕ ನಿರ್ದೇಶಕ (MD) ಆಚಾರ್ಯ ಬಾಲಕೃಷ್ಣ ಅವರು ಸಲ್ಲಿಕೆ ಮಾಡಿದ್ದ ಅಸ್ಪಷ್ಟ ಮತ್ತು ಅಸಂಬದ್ಧ ಅಫಿಡವಿಟ್ ವಿಚಾರವಾಗಿ ಪತಂಜಲಿ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡ ನ್ಯಾಯಮೂರ್ತಿ ಹಿಮಾ ಕೊಹ್ಲಿ ಮತ್ತು ನ್ಯಾಯಮೂರ್ತಿ ಅಹ್ಸಾನುದ್ದೀನ್ ಅಮಾನುಲ್ಲಾ ಅವರ ದ್ವಿಸದಸ್ಯ ಪೀಠವು ಮಂಗಳವಾರ ಸುಪ್ರೀಂ ಕೋರ್ಟ್‌ನಲ್ಲಿ ಬಾಬಾ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿತು.

             ಅಫಿಡವಿಟ್ ಸಲ್ಲಿಸಲಾಗಿದೆ ಎಂದು ಇಬ್ಬರ ಪರವಾಗಿ ವಾದ ಮಂಡಿಸಿದ ವಕೀಲರು ಸುಪ್ರೀಂ ಕೋರ್ಟ್‌ಗೆ ತಿಳಿಸಿದರು. ಈ ಕುರಿತು ಪೀಠವು ರಾಮದೇವ್ ಅವರ ಅಫಿಡವಿಟ್ ಎಲ್ಲಿದೆ ಎಂದು ಕೇಳಿತು.

ಅಸ್ಪಷ್ಟ ಮತ್ತು ಅಸಂಬದ್ಧ ಅಫಿಡವಿಟ್

         ಇಬ್ಬರೂ ಕಾಣಿಸಿಕೊಂಡಿದ್ದೀರಾ ಎಂದು ಸುಪ್ರೀಂ ಕೋರ್ಟ್ ಮತ್ತೆ ಕೇಳಿದೆ. ಈ ಕುರಿತು ಅವರ ವಕೀಲರು, ಇಬ್ಬರೂ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಇದಾದ ಬಳಿಕ ಎರಡು ಅಫಿಡವಿಟ್‌ಗಳನ್ನು ಸಲ್ಲಿಸಬೇಕಿತ್ತು, ಆದರೆ ಒಂದನ್ನು ಮಾತ್ರ ಸಲ್ಲಿಸಿದ್ದು, ಇನ್ನೊಂದನ್ನು ಸಲ್ಲಿಸಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸುಪ್ರೀಂ ಕೋರ್ಟ್, ‘ಈ ಹಿಂದೆ ನಾವು ಕಂಪನಿ ಮತ್ತು ಎಂಡಿಗೆ ಉತ್ತರವನ್ನು ಸಲ್ಲಿಸುವಂತೆ ಕೇಳಿದ್ದೆವು, ಉತ್ತರವನ್ನು ಸಲ್ಲಿಸದಿದ್ದಾಗ ನಂತರ ನ್ಯಾಯಾಂಗ ನಿಂದನೆ ನೋಟಿಸ್ ನೀಡಲಾಯಿತು ಎಂದು ಪೀಠ ಹೇಳಿದೆ.

'ವಿಷಾದ' ಸರಿ ಹೋಗಲ್ಲ.. ದೇಶ ಸೇವೆಯ ನೆಪ ಕೊಡಬೇಡಿ'

           ಬಾಬಾ ರಾಮ್‌ದೇವ್ ಮತ್ತು ಸ್ವಾಮಿ ಬಾಲಕೃಷ್ಣ ಅವರ 'ವಿಷಾದ'ಕ್ಕಾಗಿ ಸುಪ್ರೀಂ ಕೋರ್ಟ್ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿದೆ. ‘ನ್ಯಾಯಾಲಯದ ಆದೇಶಗಳನ್ನು ಲಘುವಾಗಿ ಪರಿಗಣಿಸುವಂತಿಲ್ಲ. ನಿಮ್ಮಿಂದ ಒಂದು ಭರವಸೆ ನೀಡಲಾಯಿತು ಮತ್ತು ನಂತರ ಅದನ್ನು ಉಲ್ಲಂಘಿಸಲಾಗಿದೆ. ಇದು ದೇಶದ ಅತಿ ದೊಡ್ಡ ನ್ಯಾಯಾಲಯಕ್ಕೆ ಮಾಡಿದ ಅವಮಾನವಾಗಿದ್ದು ಈಗ ಕ್ಷಮೆ ಕೇಳುತ್ತಿದ್ದೀರಿ. ಇದು ನಮಗೆ ಸ್ವೀಕಾರಾರ್ಹವಲ್ಲ ಎಂದು ಪೀಠ ಹೇಳಿದೆ.

ಸುದ್ದಿಗೋಷ್ಠಿಗೆ 'ಸುಪ್ರೀಂ' ಅಸಮಾಧಾನ

            ಅಲ್ಲದೆ ನಿಮ್ಮ ಕ್ಷಮೆ ಸಾಕಾಗುವುದಿಲ್ಲ ಎಂದು ಕೋರ್ಟ್ ಹೇಳಿದ್ದು, ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದ್ದು, ಪತಂಜಲಿ ಜಾಹೀರಾತುಗಳನ್ನು ಅಲ್ಲಿ ಮುದ್ರಿಸಲಾಗುತ್ತಿತ್ತು. ನಿಮ್ಮ ಮೀಡಿಯಾ ಡಿಪಾರ್ಟ್ ಮೆಂಟ್ ನಿಮಗಿಂತ ಭಿನ್ನವಲ್ಲ, ಯಾಕೆ ಹೀಗೆ ಮಾಡಿದೆ? ನವೆಂಬರ್‌ನಲ್ಲಿ ನಿಮಗೆ ಎಚ್ಚರಿಕೆ ನೀಡಲಾಗಿತ್ತು, ಆದರೂ ನೀವು ಪತ್ರಿಕಾಗೋಷ್ಠಿ ನಡೆಸಿದ್ದೀರಿ.

               ನವೆಂಬರ್ 21 ರ ನ್ಯಾಯಾಲಯದ ಆದೇಶದ ನಂತರವೂ, ಮರುದಿನ ಕಂಪನಿ, ಬಾಲಕೃಷ್ಣ ಮತ್ತು ರಾಮ್‌ದೇವ್ ಅವರು ಪತ್ರಿಕಾಗೋಷ್ಠಿ ನಡೆಸಿದ್ದಾರೆ. ನ್ಯಾಯಾಲಯದ ಆದೇಶದ 24 ಗಂಟೆಗಳಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ನೀವು ಜಾಹೀರಾತಿನಲ್ಲಿ ನೀವು ಪ್ರಚಾರಕರಾಗಿ ಕಾಣಿಸಿಕೊಳ್ಳುತ್ತೀರಿ. ಈಗ ಅವರು 2 ತಿಂಗಳ ನಂತರ ನ್ಯಾಯಾಲಯದ ಮುಂದೆ ಹಾಜರಾಗಿದ್ದಾರೆ ಎಂದು ಪೀಠ ಕಿಡಿಕಾರಿತು.

ಭವಿಷ್ಯದಲ್ಲಿ ಹೀಗಾಗುವುದಿಲ್ಲ: ರಾಮ್ ದೇವ್ ಪರ ವಕೀಲರಿಂದ ಕ್ಷಮೆ

        ಇನ್ನು ಕೋರ್ಟ್ ಕೆಂಡಾಮಂಡಲವಾಗುತ್ತಲೇ ಈ ಕುರಿತು ಪೀಠವನ್ನು ಸಮಾಧಾನಗೊಳಿಸಲು ಪ್ರಯತ್ನಿಸಿದ ರಾಮ್ ದೇವ್ ಪರ ವಕೀಲರು, ‘ಭವಿಷ್ಯದಲ್ಲಿ ಹೀಗಾಗುವುದಿಲ್ಲ. ಮೊನ್ನೆ ನಡೆದ ತಪ್ಪಿಗೆ ಕ್ಷಮೆ ಕೇಳೋಣ’ಎಂದರು. ಇದಾದ ಬಳಿಕ ರಾಮ್ ದೇವ್ ಕೂಡ ನ್ಯಾಯಾಲಯದ ಕ್ಷಮೆ ಯಾಚಿಸಿದರು.

ಮತ್ತೆ ಅಫಿಡವಿಟ್ ಸಲ್ಲಿಸಿ..: ನ್ಯಾಯಾಂಗ ನಿಂದನೆ ಎಚ್ಚರಿಕೆ ನೀಡಿದ ಕೋರ್ಟ್

               ಬೆಳವಣಿಗೆ ಬೆನ್ನಲ್ಲೇ ತುಸು ಸಮಾಧಾನಗೊಂಡ ಪೀಠ, 'ನಿಮ್ಮ ಕ್ಷಮೆಯಿಂದ ಸುಪ್ರೀಂ ಕೋರ್ಟ್‌ಗೆ ತೃಪ್ತಿಯಾಗಲಿಲ್ಲ. ಸುಪ್ರೀಂ ಕೋರ್ಟ್ ಆಗಿರಲಿ ಅಥವಾ ದೇಶದ ಯಾವುದೇ ನ್ಯಾಯಾಲಯವೇ ಆಗಿರಲಿ. ಆದೇಶಗಳನ್ನು ಪಾಲಿಸಬೇಕು. ನೀವೂ ಷರತ್ತುಬದ್ಧ ಕ್ಷಮೆ ಕೇಳುತ್ತಿದ್ದೀರಾ?’ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳುತ್ತೇವೆ. ಕ್ಷಮೆಯನ್ನು ಸ್ವೀಕರಿಸಬೇಡಿ, ನೀವು ಏನು ಮಾಡಿದ್ದೀರಿ. ನಿಮಗೆ ಅದರ ಬಗ್ಗೆ ಯಾವುದೇ ಕಲ್ಪನೆ ಕೂಡ ಇಲ್ಲ ಎಂದು ಪೀಠ ಕಿಡಿಕಾರಿತು.

ವಿಚಾರಣೆ ಮುಂದೂಡಿಕೆ

         ಈ ಕುರಿತು ರಾಮ್‌ದೇವ್ ಪರ ವಕೀಲರು ಕೈಮುಗಿದು ಸುಪ್ರೀಂ ಕೋರ್ಟ್‌ನಲ್ಲಿ ಕ್ಷಮೆಯಾಚಿಸಿದರು. ಬಳಿಕ ಆದಾಗ್ಯೂ, ಸೌಹಾರ್ದ ಸೂಚಕವಾಗಿ, ಬಾಬಾ ರಾಮ್‌ದೇವ್ ಮತ್ತು ಅಚಾಯ ಬಾಲಕೃಷ್ಣ ಅವರಿಗೆ ಈ ವಿಷಯದಲ್ಲಿ ಸೂಕ್ತ ಪ್ರತಿಕ್ರಿಯೆಗಳನ್ನು ಸಲ್ಲಿಸಲು ಮತ್ತೊಂದು ಕೊನೆಯ ಅವಕಾಶವನ್ನು ನೀಡಿತು ಮತ್ತು ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿತು. ಮುಂದಿನ ವಿಚಾರಣೆಯಲ್ಲಿ ಇಬ್ಬರೂ ಹಾಜರಾಗುವಂತೆ ಪೀಠ ಸೂಚಿಸಿತು.

ಏನಿದು ಪ್ರಕರಣ?

             ರಕ್ತದೊತ್ತಡ, ಮಧುಮೇಹ ಮತ್ತು ಅಸ್ತಮಾ ಸೇರಿದಂತೆ ಕೆಲವು ಕಾಯಿಲೆಗಳನ್ನು ಗುಣಪಡಿಸುತ್ತದೆ ಎಂದು ಹೇಳುವ ಪತಂಜಲಿ ಆಯುರ್ವೇದದ ಜಾಹೀರಾತುಗಳು ತಪ್ಪು ಮಾಹಿತಿಯಾಗಿದೆ ಎಂದು ಆರೋಪಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ ಅರ್ಜಿಯ ವಿಚಾರಣೆ ಇದಾಗಿದೆ. ಅಂತಹ ಕಾಯಿಲೆಗಳ ಬಗ್ಗೆ ಜಾಹೀರಾತು ನೀಡುವುದು ಮತ್ತು ಅಂತಹ ಕಾಯಿಲೆಗಳನ್ನು ಗುಣಪಡಿಸುವುದು ಸಂಪೂರ್ಣವಾಗಿ ತಪ್ಪು ಎಂದು ಐಎಂಎ ಹೇಳಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries