HEALTH TIPS

BJP Manifesto Highlights: ಯುಸಿಸಿ ಜಾರಿ, ಜೀವನ ಮಟ್ಟ ಸುಧಾರಣೆಗೆ ಒತ್ತು

 ವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ತನ್ನ ಪ್ರಣಾಳಿಕೆ 'ಸಂಕಲ್ಪ ಪತ್ರ'ವನ್ನು ಬಿಡುಗಡೆ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಅಮಿತ್‌ ಶಾ, ನಿರ್ಮಲಾ ಸೀತಾರಾಮನ್ ಹಾಗೂ ರಾಜನಾಥ್‌ ಸಿಂಗ್‌ ಅವರ ಉಪಸ್ಥಿತಿಯಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿದರು.

ಬಿಜೆಪಿ ಪ‍್ರಣಾಳಿಕೆಯಲ್ಲಿರುವ ಪ್ರಮುಖ ಅಂಶಗಳೆಂದರೆ..

  • ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಹಾಗೂ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಉಪಕ್ರಮಗಳನ್ನು ಜಾರಿ

  • ದೇಶದ ಘನತೆ, ಜನರ ಜೀವನ ಗುಣಮಟ್ಟ ಸುಧಾರಣೆಗೆ ಒತ್ತು

  • ಪ್ರತಿ ಮನೆಗೆ ಅಗ್ಗದ ಸಿಲಿಂಡರ್ ತಲುಪಿಸಿದಂತೆ ಪೈಪ್‌ ಮೂಲಕ ಗ್ಯಾಸ್‌ ತಲುಪಿಸುವ ಕಾರ್ಯವನ್ನು ಮಾಡುತ್ತೇವೆ

  • ದೇಶದ 10 ಕೋಟಿ ರೈತರಿಗೂ ಪಿಎಂ ಕಿಸಾನ್‌ ಸಮ್ಮಾನ್‌ ನಿಧಿ ಯೋಜನೆ ಮುಂದುವರಿಕೆ

  • 5G ನೆಟ್‌ವರ್ಕ್‌ಗಳ ವಿಸ್ತರಣೆ

  • ಪ್ರಪಂಚದಾದ್ಯಂತ ರಾಮಾಯಣ ಹಬ್ಬಗಳನ್ನು ಆಯೋಜನೆ

  • ಜನೌಷಧಿ ಕೇಂದ್ರಗಳಲ್ಲಿ ಜನರು ಔಷಧಗಳನ್ನು ಶೇ 80ರಷ್ಟು ರಿಯಾಯಿತಿಯಲ್ಲಿ ಪಡೆಯಲಿದ್ದು ಮುಂದಿನ ದಿನಗಳಲ್ಲಿ ಜನೌಷಧಿ ಕೇಂದ್ರಗಳ ಹೆಚ್ಚಳ

  • ಆಯುಷ್ಮಾನ್‌ ಭಾರತ್‌ ಅಡಿಯಲ್ಲಿ ಜನರು ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ ಮತ್ತು 70 ವರ್ಷ ದಾಟಿದವರು ಈ ಯೋಜನೆಗೆ ಸೇರ್ಪಡೆ.

  • ಮುದ್ರಾ ಯೋಜನೆಯಡಿ ಸಾಲದ ಮೊತ್ತವನ್ನು ₹10 ಲಕ್ಷದಿಂದ ₹ 20 ಲಕ್ಷಕ್ಕೆ ಏರಿಕೆ

  • ಮಹಿಳಾ ಕ್ರೀಡಾಪಟುಗಳ ಆರೋಗ್ಯ ರಕ್ಷಣೆಗೆ ವಿಶೇಷ ಯೋಜನೆ

  • ದಕ್ಷಿಣ, ಉತ್ತರ ಮತ್ತು ಪೂರ್ವ ಭಾಗದಲ್ಲಿ ಶೀಘ್ರ ಬುಲೆಟ್‌ ರೈಲು ಸಂಚರಿಸಲಿವೆ, ಈಗಾಗಲೇ ಅಹಮದಾಬಾದ್‌ - ಮುಂಬೈ ಬುಲೆಟ್‌ ರೈಲು ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ

  • ಮೂರು ಕೋಟಿ ಮಹಿಳೆಯರಿಗೆ ಲಕ್‌ಪತಿ ದೀದಿ ಗ್ಯಾರಂಟಿ ಮತ್ತು ಬಡವರಿಗೆ ಮನೆಗಳ ನಿರ್ಮಾಣ

  • ಎಐ, ಸೆಮಿಕಂಡಕ್ಟರ್‌ ಮತ್ತು ಬಾಹ್ಯಾಕಾಶ ವಲಯದ ಪ್ರಗತಿಗೆ ಒತ್ತು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries