ಗುವಾಹಟಿ: ಅಸ್ಸಾಂನ ಆರು ಉತ್ಪನ್ನ ಮತ್ತು ಕರಕುಶಲ ಕಲೆಗಳಿಗೆ ಭೌಗೋಳಿಕ ಮಾನ್ಯತೆ (ಜಿ.ಐ.) ದೊರಕಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಭಾನುವಾರ ತಿಳಿಸಿದ್ದಾರೆ.
ಗುವಾಹಟಿ: ಅಸ್ಸಾಂನ ಆರು ಉತ್ಪನ್ನ ಮತ್ತು ಕರಕುಶಲ ಕಲೆಗಳಿಗೆ ಭೌಗೋಳಿಕ ಮಾನ್ಯತೆ (ಜಿ.ಐ.) ದೊರಕಿದೆ ಎಂದು ರಾಜ್ಯದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ಭಾನುವಾರ ತಿಳಿಸಿದ್ದಾರೆ.
ಈ ಕುರಿತು 'ಎಕ್ಸ್'ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 'ನಬಾರ್ಡ್, ಆರ್‌ಒ ಗುವಾಹಟಿ ಮತ್ತು ಜಿಐ ತಜ್ಞ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಜನಿ ಕಾಂತ್ ಅವರ ಬೆಂಬಲದೊಂದಿಗೆ ಅಸ್ಸಾಂನ ಆರು ಸಾಂಪ್ರದಾಯಿಕ ಕಲೆಗಳಿಗೆ ಜಿಐ ಮನ್ನಣೆ ದೊರಕಿದೆ' ಎಂದು ಬರೆದಿದ್ದಾರೆ.
'ರಾಜ್ಯದ ಬಿಹು ಢೋಲ್ (ವಾದ್ಯ), ಜಾಪಿ (ಸಾಂಪ್ರದಾಯಿಕ ಟೋಪಿ), ಸರ್ಥೇಬಾಡಿ ಕಲೆ, ಅಶಾರಿಕಾಂಡಿ ಟೆರ್ರಾಕೋಟ ಕಲೆ, ಅಸ್ಸಾಂ ಮಡಕೆ ಕಲೆ, ಕೈಮಗ್ಗದ ಉತ್ಪನ್ನಗಳಿಗೆ ಈ ಮನ್ನಣೆ ದೊರಕಿದೆ. ಈ ಉತ್ಪನ್ನಗಳು ರಾಜ್ಯದ ಇತಿಹಾಸದೊಂದಿಗೆ ಬೆಸೆದುಕೊಂಡಿವೆ ಮತ್ತು ಪ್ರತಿದಿನ ಸುಮಾರು 1 ಲಕ್ಷ ಜನರ ಬದುಕಿಗೆ ಆಸರೆಯಾಗಿವೆ' ಎಂದಿದ್ದಾರೆ.
2022ರ ದ್ವಿತೀಯಾರ್ಧದಲ್ಲಿ ಜಿ.ಐ. ಮನ್ನಣೆಗಾಗಿ ಅರ್ಜಿ ಸಲ್ಲಿಸಲಾಗಿತ್ತು. ಶನಿವಾರವಷ್ಟೇ ಜಿ.ಐ. ದೃಢೀಕರಣ ದೊರಕಿದೆ.