ತಿರುವನಂತಪುರಂ: ಪ್ರಯಾಣಿಕರ ದಟ್ಟಣೆಯನ್ನು ಪರಿಗಣಿಸಿ ಕೊಚುವೇಲಿ-ಮಂಗಳೂರು ಮಾರ್ಗದಲ್ಲಿ ವಿಶೇಷ ರೈಲನ್ನು ಘೋಷಿಸಲಾಗಿದೆ.
ಇಂದು ವಿಶೇಷ ರೈಲಿನ ಮೊದಲ ಸೇವೆ ಆರಂಭಗೊಂಡಿದೆ. ಈ ರೈಲು ಎಂಟು ಸ್ಲೀಪರ್ ಕೋಚ್‍ಗಳು ಮತ್ತು ಎಂಟು ಜನರಲ್ ಕೋಚ್‍ಗಳನ್ನು ಹೊಂದಿದೆ. ಇಂದು ಮಂಗಳೂರಿನಿಂದ ಸಂಜೆ 7 ಗಂಟೆಗೆ ಹೊರಟು ಬೆಳಗ್ಗೆ 8 ಗಂಟೆಗೆ ಕೊಚುವೇಲಿ ತಲುಪಲಿದೆ.
ಮರಳಿ ನಾಳೆ ಮಧ್ಯಾಹ್ನ 2:30 ಕ್ಕೆ.ಕೊಚುವೇಲಿಯಿಂದ ಹೊರಟು ಶನಿವಾರ ಬೆಳಗಿನ ಜಾವ ಮೂರು ಗಂಟೆಗೆ ಮಂಗಳೂರು ತಲುಪಲಿದೆ. ಅದೇ ರೀತಿ 27 ರಂದು ಸಂಜೆ 7 ಗಂಟೆಗೆ ಮಂಗಳೂರಿನಿಂದ ಹೊರಡುವ ರೈಲು 28 ರಂದು ಬೆಳಿಗ್ಗೆ 8 ಗಂಟೆಗೆ ಕೊಚುವೇಲಿಗೆ ತಲುಪಲಿದೆ. 28ರಂದು ಮಧ್ಯಾಹ್ನ 2.30ಕ್ಕೆ ಕೊಚ್ಚುವೇಲಿಯಿಂದ ಹೊರಡುವ ರೈಲು 29ರಂದು ಬೆಳಗಿನ ಜಾವ 3.00 ಗಂಟೆಗೆ ಮಂಗಳೂರು ತಲುಪಲಿದೆ. ಐಆರ್ ಸಿ ಟಿ ಸಿ ವೆಬ್ ಸೈಟ್ ಸೇರಿದಂತೆ ವ್ಯವಸ್ಥೆಯ ಮೂಲಕ ರೈಲುಗಳಲ್ಲಿ ಸೀಟು ಕಾಯ್ದಿರಿಸುವಿಕೆ ಪ್ರಾರಂಭವಾಗಿದೆ.