ಕಾಸರಗೋಡು: ದಾಂಪತ್ಯದ ಹೊಸ್ತಿಲೇರುವ ಮುನ್ನ ಕಾಸರಗೋಡು ಜಿಲ್ಲೆಯ ಅಗಲ್ಪಾಡಿ ನಿವಾಸಿ ಮೋಹನಪುರುಷ-ಜಯಂತಿ ದಂಪತಿ ಪುತ್ರಿ ಸುಜಿತಾ ಮತಗಟ್ಟೆಗೆ ತೆರಳಿ ಮತದಾನದ ನಂತರ ನೇರ ಮದುವೆ ಮಂಟಪಕ್ಕೆ ತೆರಳಿದ್ದಾರೆ.
ಪುತ್ತೂರು ನರಿಮೊಗರು ನಿವಾಸಿ ಸಂತೋಷ್ ಜತೆ ಸುಜಿತಾ ವಿವಾಹ ಕೆಲವು ತಿಂಗಳ ಹಿಂದೆಯೇ ನಿಶ್ಚಯಗೊಂಡಿದ್ದು, ಏ. 26ರಂದು ಪುತ್ತೂರಿನ ಕಲ್ಯಾಣಮಂಟಪವೊಂದರಲ್ಲಿ ಮದುವೆ ಆಯೋಜಿಸಲಾಗಿತ್ತು. ಬೆಳಗ್ಗೆ ಅಗಲ್ಪಾಡಿಯ 82ನೇ ಮತಗಟ್ಟೆಗೆ ಆಗಮಿಸಿದ ಸುಜಿತಾ ತಮ್ಮ ಹಕ್ಕು ಚಲಾಯಿಸಿದ ನಂತರ ಪುತ್ತೂರಿನ ಮದುವೆ ಮಂಟಪಕ್ಕೆ ತೆರಳಿದ್ದಾರೆ.