ಸಹಾರನಪುರ: ಅಧಿಕಾರಕ್ಕೆ ಬಂದ ಬಳಿಕ 'ಕಮಿಷನ್' ಹೇಗೆ ಗಳಿಸುವುದು ಎಂಬುದು ವಿರೋಧ ಪಕ್ಷಗಳ 'ಇಂಡಿಯಾ' ಮೈತ್ರಿಕೂಟದ ಇರಾದೆಯಾಗಿದೆ. ಮತ್ತೊಂದೆಡೆ ಬಿಜೆಪಿ ನೇತೃತ್ವದ ಎನ್‌ಡಿಎಗೆ 'ಮಿಷನ್' (ಗುರಿ) ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದ್ದಾರೆ.

ಉತ್ತರ ಪ್ರದೇಶದ ಸಹಾರನಪುರದಲ್ಲಿ ಪಕ್ಷದ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, 'ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 370ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವುದನ್ನು ಹೇಗಾದರೂ ಮಾಡಿ ತಡೆಯುವುದೇ ಇಂಡಿಯಾ ಮೈತ್ರಿಕೂಟದ ಇರಾದೆಯಾಗಿದೆ' ಎಂದು ಆರೋಪಿಸಿದ್ದಾರೆ.
'ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿ ಕಮಿಷನ್ ಗಳಿಸುವುದರಲ್ಲೇ ಮಗ್ನವಾಗಿತ್ತು. ಈಗ ಇಂಡಿಯಾ ಮೈತ್ರಿಕೂಟವು ಕಮಿಷನ್ ಗಳಿಸುವ ಗುರಿಯನ್ನೇ ಹೊಂದಿದೆ. ಮತ್ತೊಂದೆಡೆ ಮೋದಿ ಸರ್ಕಾರವು ಒಂದು ಮಿಷನ್‌ನಲ್ಲಿದೆ' ಎಂದು ಅವರು ಹೇಳಿದರು.
'ಸಮಾಜವಾದಿ ಪಕ್ಷ ಪ್ರತಿ ಗಂಟೆಗೊಮ್ಮೆ ಅಭ್ಯರ್ಥಿಗಳನ್ನು ಬದಲಾಯಿಸುತ್ತಿದೆ. ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಗುತ್ತಿಲ್ಲ. ಪ್ರಬಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಧೈರ್ಯವಿಲ್ಲ' ಎಂದು ಅವರು ವಾಗ್ದಾಳಿ ನಡೆಸಿದರು.
'ಶಕ್ತಿ'ಯನ್ನು ಆರಾಧಿಸುವುದು ನಮ್ಮ ಆಧ್ಯಾತ್ಮಿಕ ಪಯಣದ ಭಾಗವಾಗಿದೆ. ಆದರೆ, ಇಂಡಿಯಾ ಒಕ್ಕೂಟದ ನಾಯಕರು ಶಕ್ತಿಯ ವಿರುದ್ಧ ಹೋರಾಡಬೇಕು ಎಂದು ಹೇಳುತ್ತಾರೆ. ಇದು ನಿಜಕ್ಕೂ ದುರದೃಷ್ಟಕರ ಎಂದು ಅವರು ಹೇಳಿದರು.