ತಿರುಪತಿ: ರಾಮ ಮಂದಿರ ಟ್ರಸ್ಟ್‌ನ ಆಹ್ವಾನದ ಮೇರೆಗೆ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಎಂಜಿನಿಯರ್‌ಗಳ ತಂಡವು ಅಯೋಧ್ಯೆಗೆ ಭೇಟಿ ನೀಡಿ, ದೇವಸ್ಥಾನದಲ್ಲಿ ಜನಸಂದಣಿಯ ನಿರ್ವಹಣೆ ಕುರಿತು ತಾಂತ್ರಿಕ ಸಲಹೆಗಳನ್ನು ನೀಡಿತು.
ತಿರುಪತಿ: ರಾಮ ಮಂದಿರ ಟ್ರಸ್ಟ್‌ನ ಆಹ್ವಾನದ ಮೇರೆಗೆ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಎಂಜಿನಿಯರ್‌ಗಳ ತಂಡವು ಅಯೋಧ್ಯೆಗೆ ಭೇಟಿ ನೀಡಿ, ದೇವಸ್ಥಾನದಲ್ಲಿ ಜನಸಂದಣಿಯ ನಿರ್ವಹಣೆ ಕುರಿತು ತಾಂತ್ರಿಕ ಸಲಹೆಗಳನ್ನು ನೀಡಿತು.
ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎ.ವಿ ಧರ್ಮಾ ರೆಡ್ಡಿ ಹಾಗೂ ರಾಮ ಮಂದಿರ ಟ್ರಸ್ಟ್‌ನ ಸಂಘಟಕರ ನಡುವೆ ಸಭೆ ನಡೆಯಿತು ಎಂದು ಟಿಟಿಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಏ.13ರಂದು ನಡೆದ ಸಭೆಯಲ್ಲಿ ಟಿಟಿಡಿಯ ತಾಂತ್ರಿಕ ಸಲಹೆಗಾರರಾದ ರಾಮಚಂದ್ರ ರೆಡ್ಡಿ ಮತ್ತು ಇತರ ಅಧಿಕಾರಿಗಳು, ರಾಮ ಮಂದಿರ ಟ್ರಸ್ಟ್ ಪರವಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿಗಳಾದ ಚಂಪತ್ ರಾಯ್ ಸೇರಿದಂತೆ ಇತರ ಅಧಿಕಾರಿಗಳು ಭಾಗಿಯಾಗಿದ್ದರು.
ಟ್ರಸ್ಟ್ ಕೋರಿಕೆಯ ಮೇರೆಗೆ ಟಿಟಿಡಿಯ ಅಧಿಕಾರಿಗಳ ತಂಡವು ಕಳೆದ ಫೆ.16 ಮತ್ತು 17ರಂದು ಅಯೋಧ್ಯೆಗೆ ಭೇಟಿ ನೀಡಿ ದಟ್ಟಣೆ ಉಂಟಾಗದಂತೆ ದೇವರ ದರ್ಶನಕ್ಕೆ ಟಿಟಿಡಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿತ್ತು.