ಕಾಸರಗೋಡು: ಲೋಕಸಭಾ ಚುನಾವಣೆಯ ಅಂಗವಾಗಿ ಜನಜಾಗೃತಿಗಾಗಿ ಆಯೋಜಿಸಿದ್ದ ಕೇರಳದ ಸಾಂಪ್ರದಾಯಿಕ ಸಮರ ಕಲೆ ‘ಕಳರಿಪಯಟ್ಟ್’ ಕಾಸರಗೋಡಿನ ಹೊಸ ಬಸ್ ನಿಲ್ದಾಣದಲ್ಲಿ ಕುತೂಹಲ ಮೂಡಿಸಿತು.
ಕುಟುಂಬಶ್ರೀ ಜಿಲ್ಲಾ ಮಿಷನ್ ನಡೆಸಿದ ಕುಟುಂಬಶ್ರೀ ಬುಡಕಟ್ಟು ಕಳರಿ ಅಕಾಡೆಮಿಯಲ್ಲಿ ಕಲಿಯುತ್ತಿರುವ ಬಾಲಸಭಾ ಸದಸ್ಯರು ಕಳರಿಪಯಟ್ಟ್ ಪ್ರಸ್ತುತಪಡಿಸಿದರು. ‘ಅಂಗಂ’ ಎಂಬ ಕಾರ್ಯಕ್ರಮಕ್ಕೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ.ಇನ್ಬಾಶೇಖರ್ ಚಾಲನೆ ನೀಡಿದರು. ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೈನಿಕರ, ಸ್ವೀಪ್ ನೋಡಲ್ ಅಧಿಕಾರಿ ಟಿ.ಟಿ.ಸುರೇಂದ್ರನ್, ಕುಟುಂಬಶ್ರೀ ನೌಕರರಾದ ಪಿ. ರತ್ನೇಶ್, ಎಂ.ಮನೀಶ್ ಮತ್ತು ಮನು ಸುರೇಂದ್ರನ್ ಭಾಗವಹಿಸಿದ್ದರು. ಇದೇ ಸಂದರ್ಭ ಬಿಳಿಹೊಟ್ಟೆಯ ಕಡಲ ಗಿಡುಗವು ಕಲೆಕ್ಟರೇಟ್ ನಿಂದ ಸಂದೇಶದೊಂದಿಗೆ ಹೊಸ ಬಸ್ ನಿಲ್ದಾಣ ತಲುಪಿತು.