ಕಾಸರಗೋಡು: ಹಳೇ ಸೂರ್ಲು ಮದ್ರಸಾ ಶಿಕ್ಷಕ ಮಹಮ್ಮದ್ ರಿಯಸ್ ಮ್ವಲವಿ ಕೊಲೆಪ್ರಕರಣದ ತೀರ್ಪಿಗೆ ಸಂಬಂಧಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಕೋಮುದ್ವೇಷ ಹರಡುವ ರೀತಿಯಲ್ಲಿ ಸಂದೆಶ ರವಾನಿಸಿರುವ ಬಗ್ಗೆ ಪೊಲೀಸರು ಸ್ವಯಂಪ್ರೇರಿತರಾಘಿ ಕೇಸು ದಾಖಲಿಸಿಕೊಂಡಿದ್ದಾರೆ.
ಜತೆಗೆ ಇಂತಹ ಸಂದೇಶ ಪೋಸ್ಟ್ ಮಾಡಿದ ಯೂಟ್ಯೂಬ್ ಐಡಿ ಮಾಲಿಕ ಮತ್ತು ಸಂದೆಸ ರವಾನಿಸಿದ ವ್ಯಕ್ತಿಯ ಪತ್ತೆಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮಹಮ್ಮದ್ ರಿಯಾಸ್ ಕೊಲೆಪ್ರಕರಣದ ತೀರ್ಪಿಗೆ ಸಂಬಂಧಿಸಿ ಸುದ್ದಿಮಾಧ್ಯಮವೊಂದರಲ್ಲಿ ಬಂದ ವರದಿಯನ್ನು ಬಳಸಿ, ಇದರ ಕೆಳಗೆ ಮತೀಯ ಸಾಮರಸ್ಯ ಹಾಳುಗೆಡಹುವ ರೀತಿಯಲ್ಲಿ ಸಂದೇಶ ರವಾನಿಸಲಾಗಿತ್ತು.