ಕಾಸರಗೋಡು: ಚಿತ್ತಾರಿ ಕುದ್ರು ಶ್ರೀ ಮೂಕಾಂಬಿಕಾ ದೇವಸ್ಥಾನದ ನವೀಕರಣ ಪುನ:ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಎ.19 ರಿಂದ ಆರಂಭಗೊಂಡಿದ್ದು ಎ.27 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಎ.19 ರಂದು ಗಣಪತಿ ಹೋಮ, ಉಗ್ರಾಣ ಮುಹೂರ್ತ, ದೀಪ ಪ್ರಜ್ವಲನೆ, ಉಗ್ರಾಣ ತುಂಬಿಸುವುದು, ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ, ಭಜನಾ ಸೇವೆಗಳ ಆರಂಭ, ಪಲ್ಲ ಪೂಜೆ, ಅನ್ನ ಸಂತರ್ಪಣೆ ನಡೆಯಿತು. ಎ.20 ರಂದು ಬೆಳಗ್ಗೆ ಮುಗುಳಿಯ ಮೆರವಣಿಗೆ, ಮಧ್ಯಾಹ್ನ ಪಲ್ಲ ಪೂಜೆ, ಅನ್ನ ಸಂತರ್ಪಣೆ, ಸಂಜೆ ತಂತ್ರಿವರ್ಯರ ಆಗಮನ, ಪೂರ್ಣಕುಂಭ ಸ್ವಾಗತ, ಸುದರ್ಶನ ಹೋಮ, ದುರ್ಗಾಪೂಜೆ, ಅವಾಹನಾ ಉಚ್ಛಾಟನಾ ಕ್ರಿಯೆಗಳು ನಡೆಯಿತು.
ಎ.21 ರಂದು ಸಂಜೆ 5 ರಿಂದ ಆಚಾರ್ಯವರಣ, ಪಶುದಾನ ಪುಣ್ಯಾಹ, ಅಂಕುರಾರೋಪಣೆ, ಪ್ರಾಸಾದ ಶುದ್ಧಿ, ಅಸ್ತ್ರ ಕಲಶ, ರಾಕ್ಷೋಘ್ನ ಹೋಮ, ವಾಸ್ತು ಕಲಶ ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಕಲಶಾಭಿಷೇಕ, ವಾಸ್ತು ಪುಣ್ಯಾಹ, ಅತ್ತಾಯ ಪೂಜೆ, ಕುಂಡ ಶುದ್ಧಿ ನಡೆಯಿತು.