ಮುಂಬೈ: ಎನ್‌ಸಿಪಿ ಹಿರಿಯ ಮುಖಂಡ ಮತ್ತು ಮಹಾರಾಷ್ಟ್ರ ಸರ್ಕಾರದ ಸಚಿವ ಛಗನ್ ಭುಜಬಲ್ ತಾವು ನಾಸಿಕ್ ಲೋಕಸಭಾ ಕ್ಷೇತ್ರದ ಟಿಕೆಟ್ ಬಯಸುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಮೂಲಕ ಮಿತ್ರಪಕ್ಷ ಶಿವಸೇನಾದೊಂದಿಗೆ ಕ್ಷೇತ್ರದ ಟಿಕೆಟ್‌ಗಾಗಿ ನಡೆಯುತ್ತಿದ್ದ ಪೈಪೋಟಿಯನ್ನು ಅಂತ್ಯಗೊಳಿಸಿ, ಅದರ ಹಾದಿ ಸುಗಮಗೊಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, 'ಕ್ಷೇತ್ರದ ಅಭ್ಯರ್ಥಿಯ ಬಗ್ಗೆ ಚರ್ಚೆ ಮಾಡುವಾಗ ಸಮೀರ್ ಭುಜಬಲ್ ಹೆಸರು ಪ್ರಸ್ತಾಪವಾಯಿತು. ಆಗ, ನಾನು ಟಿಕೆಟ್ ಕೇಳದಿದ್ದರೂ, ಅಮಿತ್ ಶಾ ನನ್ನನ್ನು ಸ್ಪರ್ಧಿಸುವಂತೆ ಕೇಳಿದರು. ಆದರೆ, ಹಾಲಿ ಸಂಸದರು ತಮ್ಮ ಪಕ್ಷದವರಾದ್ದರಿಂದ ಕ್ಷೇತ್ರದ ಟಿಕೆಟ್ ತಮ್ಮ ಪಕ್ಷಕ್ಕೇ ಬೇಕು ಎಂದು ಮುಖ್ಯಮಂತ್ರಿ ಶಿಂದೆ ಒತ್ತಾಯಿಸಿದರು. ಗೊಂದಲ ನಿವಾರಿಸಲು ನಾನು ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದೆ' ಎಂದು ಹೇಳಿದರು.