ಕಾಸರಗೋಡು: ಲೋಕಸಭಾ ಕ್ಷೇತ್ರದಲ್ಲಿ ಭಾರತ ಚುನಾವಣಾ ಆಯೋಗದಿಂದ ನೇಮಕಗೊಂಡಿರುವ ಜನರಲ್ ಒಬ್ಸರ್ವರ್ ರಿಷಿರೇಂದ್ರ ಕುಮಾರ್ ಅವರು ಕಾಞಂಗಾಡ್ ಮತ್ತು ತ್ರಿಕರಿಪುರ ಕ್ಷೇತ್ರಗಳ ಸ್ಟ್ರಾಂಗ್ ರೂಮ್‍ಗಳು ಮತ್ತು ವಿವಿಧ ಬೂತ್‍ಗಳಿಗೆ ಭೇಟಿ ನೀಡಿದರು.
ಅಪರ ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಸುಫಿಯಾನ್ ಅಹ್ಮದ್, ತೃಕ್ಕರಿಪುರ ಎಆರ್, ಸಹಾಯಕ ಜಿಲ್ಲಾಧಿಕಾರಿ(ಆರ್.ಆರ್) ಪಿ. ಶಾಜು ಮತ್ತು ಚುನಾವಣಾ ಸಿದ್ಧತೆಬಗ್ಗೆ ಮಾಹಿತಿ ನೀಡಿದರು. ಕಾಞಂಗಾಡ್ ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಕಾಞಂಗಾಡ್ ನಿತ್ಯಾನಂದ ಆಂಗ್ಲ ಮಾಧ್ಯಮ ಶಾಲೆ ಮತ್ತು ಕಡಿಞÂಮೂಲ ಎಎಲ್‍ಪಿ ಶಾಲೆ, ಮಡಿಕೈ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗಳ ಸ್ಟ್ರಾಂಗ್ ರೂಮ್‍ಗಳಿಗೆ ಭೇಟಿ ನೀಡಿದರು.