ಲಿವರ್ ಒಳ್ಳೆಯ ರೀತಿಯಲ್ಲಿ ಕಾರ್ಯನಿರ್ವಹಿಸುವುದು ತುಂಬಾನೇ ಮುಖ್ಯ. ಲಿವರ್‌ನ ಕಾರ್ಯದಲ್ಲಿ ವ್ಯತ್ಯಾಸ ದೇಹದ ಇತರ ಅಂಗಾಂಗಗಳಿಗೆ ತೊಂದರೆಯಾಗುವುದು. ಏಕೆಂದರೆ ಲಿವರ್ ದೇಹದಲ್ಲಿರುವ ಬೇಡದ ಕಶ್ಮಲವನ್ನು ಹೊರ ಹಾಕುವ ಕೆಲಸ ಮಾಡುತ್ತದೆ. ಈ ಲಿವರ್ ಆರೋಗ್ಯ ಕೈಕೊಟ್ಟರೆ ಅರಿಶಿಣ ಕಾಮಲೆ, ಫ್ಯಾಟಿ ಲಿವರ್ ಸಮಸ್ಯೆ ಕಂಡು ಬರುವುದು.
ಲಿವರ್ ಸಮಸ್ಯೆಯಾಗಿದೆ ಎಂಬುವುದರ ಸೂಚನೆಗಳಿವು
ಗ್ಯಾಸ್ಟ್ರಿಕ್ ಉಂಟಾಗುವುದು, ಗ್ಯಾಸ್ಟ್ರಿಕ್‌ಗೆ ಔಷಧ ತೆಗೆದರೂ ಕಡಿಮೆಯಾಗಲ್ಲ
ಹೊಟ್ಟೆ ಉಬ್ಬಿದಂತೆ ಅನಿಸುವುದು
ಕಣ್ಣಿನ ಸುತ್ತ ಕಪ್ಪು ಕಲೆ ಬೀಳುವುದು
ಒಂಥರಾ ಕಿರಿಕಿರಿ
ಬೇಗನೆ ಕೋಪ ಮಾಡಿಕೊಳ್ಳುವುದು
ಮುಖದಲ್ಲಿ ಮೊಡವೆ ರೀತಿ ಕಂಡು ಬರುವುದು
ಮಹಿಳೆಯರಿಗೆ ಋತುಚಕ್ರದಲ್ಲಿ ವ್ಯತ್ಯಾಸ ಉಂಟಾಗುವುದು
ಸುಸ್ತು
ಆಹಾರ ತಿಂದ ತಕ್ಷಣ ಅಜೀರ್ಣ ಸಮಸ್ಯೆ
ಅರಿಶಿಣ ಕಾಮಲೆ ಕಾಯಿಲೆ ಉಂಟಾದರೆ ಕಂಡು ಬರುವ ಲಕ್ಷಣಗಳು
ಮುತ್ರ ಹಳದಿಯಾಗುವುದು
ಕಣ್ಣುಗಳು, ಕೈ ಬೆರಳುಗಳು ಹಳದಿಯಾಗುವುದು
ಫ್ಯಾಟಿ ಲಿವರ್ ಸಮಸ್ಯೆ
ಫ್ಯಾಟಿ ಲಿವರ್ ಉಂಟಾದರೆ ಕಣ್ಣಿನಲ್ಲಿ ಊತ ಕಂಡು ಬರುವುದು
ಕಿಬ್ಬೊಟ್ಟೆಯಲ್ಲಿ ನೀರು ತುಂಬಿಕೊಂಡು ಕೂರುವುದು ಕಷ್ಟವಾಗುವುದು
ಕಾಲುಗಳಲ್ಲಿ , ಪಾದಗಳಲ್ಲಿ ಊತ ಕಂಡು ಬರುವುದು. ನಡೆದಾಡಲು, ಸ್ವಲ್ಪ ಹೊತ್ತು ನಿಲ್ಲಲು ಕಷ್ಟವಾಗುವುದು
ಮೈ ಊದಿಕೊಳ್ಳುವುದು
ಉರಿಯೂತದ ಸಮಸ್ಯೆ ಉಂಟಾಗುವುದು
ಫ್ಯಾಟಿ ಲಿವರ್ ಉಂಟಾದರೆ ಚಿಕಿತ್ಸೆ, ಆಹಾರಕ್ರಮ, ವ್ಯಾಯಮದ ಮೂಲಕ ಕಡಿಮೆಮಾಡಿಕೊಳ್ಳಬಹುದು.
ಲಿವರ್ ಸಮಸ್ಯೆಯಾದರೆ ಚಿಕಿತ್ಸೆಯೇನು?
ಲಿವರ್ ಸಮಸ್ಯೆ ಉಂಟಾದರೆ ವೈದ್ಯರು ಮೊದಲಿಗೆ ಮಾತ್ರೆ, ಇಂಜೆಕ್ಷನ್ ಮೂಲಕ ಚಿಕಿತ್ಸೆ ನೀಡುತ್ತಾರೆ. ಲಿವರ್‌ಗೆ ತುಂಬಾನೇ ಅಪಾಯ ಉಂಟಾದರೆ ಲಿವರ್ ಕಸಿ ಮಾಡಬೇಕು.
ಲಿವರ್ ಕಸಿ ಮಾಡುವುದು ತುಂಬಾ ವಿರಳ. ಏಕೆಂದರೆ ಲಿವರ್ ದಾನಿಗಳು ಸಿಗುವುದು ಕಷ್ಟ. ಲಿವರ್ ದಾನ ಮಾಡಿದರೆ ನಮ್ಮ ಲಿವರ್‌ಗೆ ತೊಂದರೆಯಾಗುತ್ತದೆ ಎಂದು ಲಿವರ್ ದಾನ ಮಾಡಲು ಭಯಪಡುತ್ತಾರೆ. ಆದರೆ ಲಿವರ್ ದಾನ ಮಾಡಿ 6 ವಾರಗಳಲ್ಲಿ ಲವರ್ ಮೊದಲಿನ ರೀತಿಯಾಗುವುದು, ಆದ್ದರಿಂದಾಗಿ ಲಿವರ್ ದಾನ ಮಾಡಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
ಲಿವರ್ ಆರೋಗ್ಯಕ್ಕೆ ಯಾವ ಬಗೆಯ ಆಹಾರ ಒಳ್ಳೆಯದು?
ಬೆಳ್ಳುಳ್ಳಿ
ಲಿವರ್ ಆರೋಗ್ಯಕ್ಕೆ ಲಿವರ್ ತುಂಬಾನೇ ಒಳ್ಳೆಯದು. ಬೆಳ್ಳುಳ್ಳಿಯನ್ನು ಅಡುಗೆಗೆ, ಹಸಿ ಬೆಳ್ಳುಳ್ಳಿ, ಬೆಳ್ಳುಳ್ಳು ಪುಡಿ ಹೀಗೆ ಯಾವುದೇ ರೀತಿಯಲ್ಲಿ ಬೆಳ್ಳುಳ್ಳಿ ಸೇವಿಸಬಹುದು. ಬೆಳ್ಳುಳ್ಳಿ ಮೈ ಕೊಬ್ಬು ಕರಗಿಸಲೂ ಸಹಕಾರಿ.
ದ್ರಾಕ್ಷಿ
ಲಿವರ್ ಆರೋಗ್ಯಕ್ಕೆ ದ್ರಾಕ್ಷಿ ತುಂಬಾನೇ ಒಳ್ಳೆಯದು, ಇದರಲ್ಲಿ ವಿಟಮಿನ್ ಸಿ, ಶರ್ಕರ ಪಿಷ್ಟ (ಪೆಕ್ಟಿನ್), ಆ್ಯಂಟಿಆಕ್ಸಿಡೆಂಟ್ ಇರುವುದರಿಂದ ಲಿವರ್‌ನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಬೀಟ್‌ರೂಟ್, ಬೀಟ್‌ರೂಟ್ ರಕ್ತ ಹೆಚ್ಚಿಸುವುದು, ಲಿವರ್‌ನ ಆ ಆರೋಗ್ಯಕ್ಕೆ ಒಳ್ಳೆಯದು.
ನಿಂಬೆಹಣ್ಣು
ಬೆಳಗ್ಗೆ ಬಿಸಿ ನೀರಿಗೆ ಸ್ವಲ್ಪ ನಿಂಬೆರಸ ಹಕಿ ಕುಡಿಯುವುದರಿಂದ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು.
ಕಾಫಿ
ನಿಮ್ಮ ಲಿವರ್ ಆರೋಗ್ಯ ಹೆಚ್ಚಿಸುವಲ್ಲಿ ಕಾಫಿ ಪ್ರಮುಖ ಪಾತ್ರವಹಿಸುತ್ತದೆ. ನೀವು ಬೆಲ್ಲದ ಕಾಫಿ , ಸಕ್ಕರೆ ಹಾಕದ ಬ್ಲ್ಯಾಕ್ ಕಾಫಿ ಸೇವನೆ ಮಾಡಿ.
ಬೆರ್ರಿ ಹಣ್ಣುಗಳು
ಕ್ರ್ಯಾನ್ ಬೆರ್ರಿ ಹಣ್ಣುಗಳನ್ನು ನಿರಂತರವಾಗಿ 21 ದಿನ ತಿಂದರೆ ನಿಮ್ಮ ಲಿವರ್‌ನ ಆರೋಗ್ಯ ಉತ್ತಮವಾಗುವುದು ಎಂದು ಅಧ್ಯಯನ ವರದಿ ಹೇಳಿದೆ,
ಈ ತರಕಾರಿ ಒಳ್ಳೆಯದು
ಬೀಟ್‌ರೂಟ್, ಬ್ರೊಕೋಲಿ, ಕ್ಯಾಬೇಜ್,ಈ ಬಗೆಯ ತರಕಾರಿಗಳಿ ಮೊಳಕೆ ಬರಿಸಿದ ಕಾಳುಗಳು, ಬ್ರೊಕೋಲಿ, ಸಾಸಿವೆ ಸೊಪ್ಪು, ಕ್ಯಾಬೇಜ್, ಹೂಕೋಸು ಈ ಬಗೆಯ ತರಕಾರಿಗಳ ಸೇವನೆ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದು.
ನಟ್ಸ್
ದಿನದಲ್ಲಿ ಸ್ವಲ್ಪ ನಟ್ಸ್ ಸೇವನೆ ಲಿವರ್ ಆರೋಗ್ಯಕ್ಕೆ ಮಾತ್ರವಲ್ಲ, ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು.
ನಾನ್ ವೆಜ್, ಫಾಸ್ಟ್ ಫುಡ್ಸ್, ಜಂಕ್ಸ್, ಮದ್ಯ ಈ ಬಗೆಯ ಆಹಾರಗಳು ಲಿವರ್ ಆರೋಗ್ಯಕ್ಕೆ ಒಳ್ಳೆಯದಲ್ಲ, ದಿನಾ ಸ್ವಲ್ಪ ಹೊತ್ತು ವ್ಯಾಯಾಮ ಮಾಡಿ.