ಕಣ್ಣೂರು: ಪಾನೂರು ಸ್ಪೋಟಕ್ಕೆ ಡಿವೈಎಫ್‍ಐ ಹೊಣೆಯಲ್ಲ ಎಂದು ರಾಜ್ಯ ಕಾರ್ಯದರ್ಶಿ ವಿ.ಕೆ.ಸನೋಜ್ ಹೇಳಿದ್ದಾರೆ. ಸದ್ಯ ಸ್ಥಳೀಯ ಮುಖಂಡರನ್ನು ಬಂಧಿಸಲಾಗಿದೆ ಎಂದಿರುವರು.
ಯಾರಾದರೂ ಭಾಗಿಯಾಗಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಕಾರ್ಯಕರ್ತರು ಸ್ಫೋಟದಲ್ಲಿ ಭಾಗಿಯಾಗಿದ್ದರೆ ಅದನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳುವುದಿಲ್ಲ ಎಂದು ಸನೋಜ್ ಹೇಳಿದ್ದಾರೆ.
ಅಲ್ಲಿ ಇಂತಹ ಘಟನೆ ನಡೆದಾಗ ಬಹಳಷ್ಟು ಜನ ಸೇರಿದ್ದರು. ಆ ಗುಂಪಿನಲ್ಲಿ ಡಿವೈಎಫ್‍ಐನ ಸ್ಥಳೀಯ ಮುಖಂಡರೂ ಇದ್ದರು. ಬಾಂಬ್ ತಯಾರಿಕೆಯಲ್ಲಿ ತೊಡಗಿದ್ದರೆ ಅವರನ್ನು ಒಪ್ಪಿಕೊಳ್ಳುವುದಿಲ್ಲ. ಡಿವೈಎಫ್‍ಎ ಚುನಾವಣೆಗೂ ಮುನ್ನ ಬಾಂಬ್ ತಯಾರಿಸುವ ಸಂಘಟನೆಯಾಗಿದೆ ಎಂದು ಬಿಂಬಿಸುವ ಯತ್ನ ಇದು ಎಂದವರು ಆರೋಪಿಸಿದರು.
ಇದೇ ವೇಳೆ ಪಾನೂರು ಸ್ಫೋಟದ ಪ್ರಮುಖ ಯೋಜಕ ಡಿವೈಎಫ್‍ಐ ಘಟಕದ ಕಾರ್ಯದರ್ಶಿ ಎಂದು ಪೋಲೀಸರು ತಿಳಿಸಿದ್ದಾರೆ. ಕುನ್ನತುಪರಂಬದಲ್ಲಿ ಘಟಕದ ಕಾರ್ಯದರ್ಶಿ ಶಿಜಲ್‍ಗಾಗಿ ಪೆÇಲೀಸರು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಈ ಹಿಂದೆ ಬಂಧಿತನಾದ ಅಮಲ್ ಬಾಬು ಕೂಡ ಡಿವೈಎಫ್ ಐ ಕಾರ್ಯಕರ್ತ.