ಜೆರುಸಲೇಂ: ಗಾಜಾ ಪಟ್ಟಿಯ ದಕ್ಷಿಣದಲ್ಲಿ ಇರುವ ಖಾನ್ ಯೂನಿಸ್ ನಗರದಿಂದ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಂಡಿರುವುದಾಗಿ ಇಸ್ರೇಲ್ ಮಿಲಿಟರಿ ಭಾನುವಾರ ತಿಳಿಸಿದೆ.
ಜೆರುಸಲೇಂ: ಗಾಜಾ ಪಟ್ಟಿಯ ದಕ್ಷಿಣದಲ್ಲಿ ಇರುವ ಖಾನ್ ಯೂನಿಸ್ ನಗರದಿಂದ ಸೇನಾಪಡೆಯನ್ನು ಹಿಂದಕ್ಕೆ ಕರೆಸಿಕೊಂಡಿರುವುದಾಗಿ ಇಸ್ರೇಲ್ ಮಿಲಿಟರಿ ಭಾನುವಾರ ತಿಳಿಸಿದೆ.
ಈ ನಡೆಯ ಪರಿಣಾಮವಾಗಿ ಈ ಪ್ರದೇಶದಲ್ಲಿರುವ ಇಸ್ರೇಲ್‌ನ ಸೇನಾ ಸಿಬ್ಬಂದಿಯ ಸಂಖ್ಯೆಯು ಹಮಾಸ್ ವಿರುದ್ಧದ ಸಮರ ಆರಂಭವಾದ ನಂತರದಲ್ಲಿನ ಕಡಿಮೆ ಮಟ್ಟ ತಲುಪಿದೆ.
ಗಾಜಾದಲ್ಲಿ ಇಸ್ರೇಲ್‌ನ ಸೇನಾ ಸಿಬ್ಬಂದಿ ಗಣನೀಯ ಸಂಖ್ಯೆಯಲ್ಲಿ ಇದ್ದಾರೆ. ಅವರು ಖಾನ್ ಯೂನಿಸ್ ಸೇರಿದಂತೆ ಹಲವು ಪ್ರದೇಶಗಳ ಮೇಲೆ ನಿರ್ದಿಷ್ಟವಾಗಿ ಗುರಿ ಇರಿಸಿ ಕಾರ್ಯಾಚರಣೆ ಮುಂದುವರಿಸುತ್ತಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.