ಮ್ಯಾಡ್ರಿಡ್: ಸಾಮಾನ್ಯವಾಗಿ ನಾವು ಮಿಸ್ ಇಂಡಿಯಾ, ಮಿಸ್ ವರ್ಲ್ಡ್, ಮಿಸ್ ಯೂನಿವರ್ಸ್ ಸೌಂಧರ್ಯ ಸ್ಪರ್ಧೆಗಳನ್ನು ಕೇಳಿದ್ದೇವೆ. ಆದರೆ ಇದೀಗ ಎಐ ಕೂಡ ಇದರಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ಪ್ಲಾನ್ ಮಾಡಿದ್ದು ಮಿಸ್ ಎಐ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ಕೌಶಲ್ಯ, ಪ್ರತಿಭೆ, ಹಾವಭಾವ ಮುಂತಾದ ಕೆಲವು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ವಿಜೇತ ಎಐಯನ್ನು ಆಯ್ಕೆ ಮಾಡಲಾಗುತ್ತದೆ. ಕಂಪ್ಯೂಟರ್ ರಚಿತ ಸುಂದರಿಗಳು ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮ ವೈಯ್ಯಾರ, ಪ್ರತಿಭೆ ಪ್ರದರ್ಶಿಸುತ್ತವೆ.
ವರ್ಲ್ಡ್ ಎಐ ಕ್ರಿಯೇಟರ್ ಅವಾರ್ಡ್ಸ್ ಆಯೋಜಿಸುತ್ತಿರುವ ಈ ಸೌಂದರ್ಯ ಸ್ಪರ್ಧೆಯನ್ನು ಟೆಕ್ ಪ್ರಪಂಚದ 'ಆಸ್ಕರ್ ಎಂದು ಕರೆಯಲಾಗುತ್ತಿದೆ. ವಿಷೇಶ ಏನೆಂದರೆ ಈ ಸ್ಪರ್ಧೆಯಲ್ಲಿ ಆರ್ಟಿಫಿಷಿಯಲ್ ಮಾಡೆಲ್‌ಗಳೇ ತೀರ್ಪುಗಾರರಾಗಿದ್ದಾರೆ. ಅದರಲ್ಲಿ ಸ್ಪೇನ್ ದೇಶದ ಮೊದಲ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಮಾಡೆಲ್ ಐಟಾನಾ ಲೋಪೆಜ್ ಮತ್ತು ಮತ್ತೊಂದು ಪ್ರಭಾವಿ ಎಐ ಮಾಡೆಲ್ ಎಮಿಲಿ ಪೆಲ್ಲೆಗ್ರಿನಿ ಈ ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿ ಆಯ್ಕೆಯಾಗಿವೆ.
ಮುಖ್ಯವಾಗಿ ಈ ಎಐ ಸ್ಪರ್ಧೆಯಲ್ಲಿ ಗೆದ್ದ ಕೃತಕ ಬುದ್ಧಿಮತ್ತೆಯ ಸುಂದರಿ ಎಐಗೆ 15 ಲಕ್ಷ ಬಹುಮಾನ ಸಿಗಲಿದೆ. ಏಪ್ರಿಲ್ 21 ರಿಂದ ಆರ್ಟಿಫಿಶಿಯಲ್ ಇಂಟೆಲಿಜೆನ್ಸಿ ಸುಂದರಿಗಳ ಅರ್ಜಿ ಆಹ್ವಾನಿಸಲಾಗುತ್ತಿದ್ದು, ಮೇ 10 ರಂದು ವಿಜೇತ ಎಐಯನ್ನು ಘೋಷಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.