ತಿರುವನಂತಪುರಂ: ಕೇರಳ ಚುನಾವಣೆಗೆ ಸಜ್ಜಾಗಿದೆ ಎಂದು ಮುಖ್ಯ ಚುನಾವಣಾಧಿಕಾರಿ ಸಂಜಯ್ ಕೌಲ್ ಹೇಳಿದ್ದಾರೆ. ಪಾರದರ್ಶಕ ಚುನಾವಣೆ ನಡೆಸಲಾಗುವುದು ಎಂದು ಹೇಳಿದರು.
ನಕಲಿ ಮತದಾನಕ್ಕೆ ಯತ್ನಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಮನೆಯಲ್ಲಿ ಮತದಾನದ ವೇಳೆ ನಕಲಿ ಮತ ಚಲಾವಣೆಯಾದ ದೂರುಗಳ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಲಾಗಿದೆ. ಈ ಕ್ರಮವನ್ನು ಎಚ್ಚರಿಕೆಯಂತೆ ನೋಡಬೇಕು ಎಂದು ಸಂಜಯ್ ಕೌಲ್ ತಿಳಿಸಿದ್ದಾರೆ.
ಉಲ್ಲಂಘನೆ ದೂರುಗಳನ್ನು ತ್ವರಿತವಾಗಿ ಪರಿಹರಿಸಲಾಗುವುದು. ಅಣಕು ಮತದಾನ ಕುರಿತು ಎದ್ದಿರುವ ದೂರಿನಲ್ಲಿ ಯಾವುದೇ ಆಧಾರವಿಲ್ಲ. ಮತದಾನದ ಬಹಿರಂಗ ಪ್ರಚಾರ ಅವಧಿಯ ಬಳಿಕದ ಮೌನ ಅಭಿಯಾನದ ವೇಳೆ ಸಾಮಾಜಿಕ ಮಾಧ್ಯಮಗಳಲ್ಲಿ ಕಟ್ಟುನಿಟ್ಟಿನ ನಿಗಾ ಇಡಲಾಗುವುದು ಎಂದು ಸಂಜಯ್ ಕೌಲ್ ಹೇಳಿದ್ದಾರೆ. ಏತನ್ಮಧ್ಯೆ, ನಾಳೆ ಚುನಾವಣಾ ಪ್ರಚಾರ ಕೊನೆಗೊಳ್ಳುತ್ತಿದ್ದಂತೆ, ಅಭ್ಯರ್ಥಿ, ರಾಜಕೀಯ ಪಕ್ಷಗಳು ಮತಗಳನ್ನು ಭದ್ರಪಡಿಸಿಕೊಳ್ಳಲು ಸಕ್ರಿಯವಾಗಿ ಪ್ರಯತ್ನಿಸುತ್ತಿವೆ.
20 ಕ್ಷೇತ್ರಗಳಲ್ಲಿ 194 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅವರಲ್ಲಿ 25 ಮಂದಿ ಮಹಿಳೆಯರು. ಕೊಟ್ಟಾಯಂ ಕ್ಷೇತ್ರದಲ್ಲಿ ಅತಿ ಹೆಚ್ಚು ಅಭ್ಯರ್ಥಿಗಳು (14) ಇದ್ದಾರೆ. ಆಲತ್ತೂರಿನಲ್ಲಿ ಅತಿ ಕಡಿಮೆ ಅಭ್ಯರ್ಥಿಗಳಿದ್ದಾರೆ (5). ಕೋಝಿಕ್ಕೋಡ್‍ನಲ್ಲಿ 13, ಕೊಲ್ಲಂ ಮತ್ತು ಕಣ್ಣೂರಿನಲ್ಲಿ ತಲಾ 12 ಅಭ್ಯರ್ಥಿಗಳಿದ್ದಾರೆ. ಕಾಸರಗೋಡು, ಕಣ್ಣೂರು, ವಯನಾಡು, ಮಲಪ್ಪುರಂ, ಕೋಝಿಕ್ಕೋಡ್, ಪಾಲಕ್ಕಾಡ್, ತ್ರಿಶೂರ್ ಮತ್ತು ತಿರುವನಂತಪುರಂ ಜಿಲ್ಲೆಗಳ ಎಲ್ಲಾ ಬೂತ್‍ಗಳಲ್ಲಿ ಲೈವ್ ಮಾನಿಟರಿಂಗ್ ಸಿಸ್ಟಮ್ ವೆಬ್‍ಕಾಸ್ಟಿಂಗ್ ಮಾಡಲಾಗುವುದು.
ಉಳಿದ ಆರು ಜಿಲ್ಲೆಗಳಲ್ಲಿ ಶೇ 75ರಷ್ಟು ಬೂತ್‍ಗಳಲ್ಲಿ ವೆಬ್‍ಕಾಸ್ಟಿಂಗ್ ಸೌಲಭ್ಯವಿದೆ. ಈ ಜಿಲ್ಲೆಗಳಲ್ಲಿನ ಎಲ್ಲಾ ಸೂಕ್ಷ್ಮ ಬೂತ್‍ಗಳು ರಿಯಲ್ ಟೈಂ ಮೇಲ್ವಿಚಾರಣೆಯಲ್ಲಿರುತ್ತವೆ.