ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ಪ್ರತಿಷ್ಟಾ ದಿನ ವಾರ್ಷಿಕೋತ್ಸವದಂದು ಸಮರ್ಪಿಸಲಿರುವ ನೂತನ ಚಂದ್ರಮಂಡಲ ರಥದ ಭವ್ಯಶೋಭಾಯಾತ್ರೆ ಅಡ್ಕಸ್ಥಳದಿಂದ ಕಾಟುಕುಕ್ಕೆ ದೇವಾಲಯದವರೆಗೆ ನಡೆಯಿತು. ಆಕರ್ಷಕ ಚೆಂಡೆಮೇಳ, ಗೊಂಬೆ ಕುಣಿತ, ಕುಣಿತ ಭಜನಾ ತಂಡಗಳೊಂದಿಗೆ ಶೋಭಾಯಾತ್ರೆ ದೇವಸ್ಥಾನಕ್ಕೆ ತಲುಪಿತ್ತು. ನೂತನ ಚಂದ್ರಮಂಡಲ ಸಮರ್ಪಣಾ ಸಮಾರಂಭ ಏ. 2ರಂದು ಜರುಗಲಿದೆ.
ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ನೇತೃತ್ವ ವಹಿಸುವರು. ಏ. 1ರಂದು ಸಂಜೆ 7.30ಕ್ಕೆ ರಾಕ್ಷೋಘ್ನ ಹೋಮ, ವಾಸ್ತುಬಲಿ, ನೂತನ ಚಂದ್ರಮಂಡಲ ರಥ ಪರಿಗ್ರಹಣ ನಡೆಯಿತು. ಏ. 2ರಂದು ಬೆಳಗ್ಗೆ 7.30ರಿಂದ ಉಷ:ಪೂಜೆ, 108 ಕಾಯಿ ಗಣಪತಿ ಹೋಮ, ಬಲಿವಾಡು ಕೂಟ, ಶತರುದ್ರಾಭಿಷೇಕ, ಕಲಶಾಭಿಷೇಕ, ತುಲಾಭಾರ ಸೇವೆ ನಡೆಯುವುದು. ಸಂಜೆ 7.30ಕ್ಕೆ ರಂಗಪೂಜೆ, ರಾತ್ರಿ 9ಕ್ಕೆ ಶ್ರೀದೇವರ ಬಲಿ ಉತ್ಸವ, ಭೂತಬಲಿ, ಬೆಡಿ, ಪಲ್ಲಕ್ಕಿ ಉತ್ಸವ, ಶ್ರೀದೇವರ ವೈಭವದ ರಥೋತ್ಸವ, ದರ್ಶನಬಲಿ, ಬಟ್ಟಲುಕಾಣಿಕೆ ನಡೆಯುವುದು.