HEALTH TIPS

ಇದು ಮಾಮೂಲಿ ರೈಸ್ ಅಲ್ಲ..ತೆಂಗಿನಕಾಯಿ ರೈಸ್..! ಮಾಡೋದು ಸುಲಭ.!

Top Post Ad

Click to join Samarasasudhi Official Whatsapp Group

Qries

 ಬೆಳಗ್ಗೆಯ ತಿಂಡಿ ಮಾಡ್ಬೇಕು ಅಂದ್ರೆ ನೀವು ಹೆಚ್ಚು ಆಲೋಚನೆಯಲ್ಲಿ ಮುಳುಗಬೇಕು. ಯಾಕಂದ್ರೆ ನಿತ್ಯ ಒಂದೇ ರೀತಿ ತಿಂಡಿ ಮಾಡುವುದು ಅಂದ್ರೆ ನಿಮಗೂ ಬೇಜಾರು ತಿನ್ನಲ್ಲು ಸಹ ಅಷ್ಟೇ ಬೇಜಾರು. ಆದ್ರೆ ಹೊಸದಾಗಿ ಮಾಡೋದಾದ್ರು ಏನು? ಇದು ಎಲ್ಲರಿಗೂ ಕಾಡುವ ಸಾಮಾನ್ಯ ಪ್ರಶ್ನೆಯಾಗಿದೆ. ನಿತ್ಯ ಬೆಳಗಾದರೆ ಯಾವುದಾದರು ಒಂದು ತಿಂಡಿ ಮಾಡಬೇಕು. ಆದ್ರೆ ನೀವು ದಿನಕ್ಕೊಂದು ರೆಸಿಪಿ ಮಾಡಲು ಇಚ್ಛಿಸಿದರೆ ಈ ತೆಂಗಿನಕಾಯಿ ರೈಸ್ ಮಾಡಿನೋಡಿ. ಬೇರೆಲ್ಲಾ ಅನ್ನಕ್ಕಿಂತ ಹೆಚ್ಚು ರುಚಿಕರ ಮತ್ತು ಇನ್ನಷ್ಟು ಸೇವಿಸಬೇಕು ಎಂಬ ಆಸೆ ಮೂಡುವಷ್ಟು ರುಚಿ ಹೊಂದಿರುತ್ತದೆ. ಹೆಸರೇ ಹೇಳುವಂತೆ ತೆಂಗಿನಕಾಯಿ ತುರಿಯನ್ನು ಬಳಸಿ ಮಾಡಬಹುದಾದ ರೈಸ್ ಇದಾಗಿದೆ. ಹೀಗಾಗಿ ಸಿಕ್ಕಾಪಟ್ಟೆ ರುಚಿ ಹಾಗೂ ಮಾಡಲು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

ಸಾಮಾನ್ಯವಾಗಿ ತೆಂಗಿನಕಾಯಿಂದ ಮಾಡಲಾಗುವ ಖಾದ್ಯಗಳು ತಮ್ಮ ಅದ್ಭುತವಾದ ರುಚಿ ಮತ್ತು ಸರಳತೆಗಾಗಿ ಪ್ರಸಿದ್ಧಿಯನ್ನು ಪಡೆದಿವೆ. ಇದರಲ್ಲಿ ಬಳಸಲಾಗುವ ಸರಳ ಪದಾರ್ಥಗಳು ಮತ್ತು ಗಿಡ ಮೂಲಿಕೆಗಳು ಇದರ ಅದ್ಭುತ ರುಚಿಗೆ ಕಾರಣವಾಗಿರುತ್ತವೆ. ಇಂತಹ ಆಹಾರಗಳಲ್ಲಿ ತೆಂಗಿನಕಾಯಿ ರೈಸ್ ರೆಸಿಪಿ ಸಹ ಒಂದು. ಇದನ್ನು ಮಾಡುವುದು ತುಂಬಾ ಸುಲಭ. ಬೇಕಾಗುವ ಪದಾರ್ಥಗಳು ಸಹ ಕಡಿಮೆ. ಹಾಗಾದರೆ ತೆಂಗಿನಕಾಯಿ ರೆಸಿಪಿ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯುತ್ತದೆ ಎಂಬುದನ್ನು ನಾವಿಂದು ತಿಳಿಯೋಣ.
ತೆಂಗಿನಕಾಯಿ ರೈಸ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು ತೆಂಗಿನಕಾಯಿ (ತುರಿ) - 1 ಕಪ್ ಅನ್ನ - 1 ಬೌಲ್ ಜೀರಿಗೆ - 1/4 ಟೀಸ್ಪೂನ್ ಸಾಸಿವೆ - 1/4 ಟೀಸ್ಪೂನ್ ನೆಲ ಕಡಲೆ - 1 tbs ಉದ್ದಿನಬೇಳೆ - 1 tbs ಹುರಿಗಡಲೆ - 1 ಟೀಸ್ಪೂನ್ ಗೋಡಂಬಿ - 10 ಪಿಸಿಗಳು ಶುಂಠಿ-1/2 ಇಂಚು ಕೆಂಪು ಮೆಣಸಿನಕಾಯಿ - 3 ಹಸಿರು ಮೆಣಸಿನಕಾಯಿ - 3 ಕರಿಬೇವಿನ ಎಲೆಗಳು - 1 tbs ನೀರು - 1/2 ಕಪ್ ಅಡುಗೆ ಎಣ್ಣೆ ರುಚಿಗೆ ಉಪ್ಪು ತೆಂಗಿನಕಾಯಿ ರೈಸ್ ಮಾಡುವ ವಿಧಾನ
ಮೊದಲು ತೆಂಗಿನ ತುರಿಯನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನಿರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡು ತೆಂಗಿನ ಹಾಲು ಮಾಡಿಕೊಳ್ಳಬೇಕು. ಈ ಹಾಲು ತೆಗೆದು ಬದಿಗೆ ಇಟ್ಟುಕೊಳ್ಳಿ. ಈಗ ಒಲೆ ಮೇಲೆ ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಜೀರಿಗೆ, ಸಾಸಿವೆ, ಉದ್ದಿನ ಬೇಳೆ, ಹುರಿಗಡಲೆ, ಕಡಲೆ ಬೇಳೆ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 2 ನಿಮಿಷದ ಬಳಿಕ ಗೋಡಂಬಿ ಹಾಕಿಕೊಳ್ಳಿ, ಇದಕ್ಕೆ ಶುಂಠಿ, ಒಣ ಮೆಣಸು, ಹಸಿಮೆಣಸು, ಕರಿಬೇವಿನ ಸೊಪ್ಪು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ಎಣ್ಣೆ ಸ್ವಲ್ಪ ಜಾಸ್ತಿ ಹಾಕಿಕೊಳ್ಳಿ. ಇದಕ್ಕೆ ಸ್ವಲ್ಪ ತುರಿದ ತೆಂಗಿನ ಕಾಯಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ರುಬ್ಬಿಟ್ಟ ತೆಂಗಿನಕಾಯಿ ಹಾಲು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಒಂದು ನಿಮಿಷ ಬಿಟ್ಟು ಅದಕ್ಕೆ ಅನ್ನವನ್ನ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಅನ್ನ ಹಾಕಿದ ತಕ್ಷಣ ಒಲೆ ಆಫ್ ಮಾಡಿಕೊಳ್ಳಿ. ಒಲೆ ಆಫ್ ಮಾಡಿದ 1 ನಿಮಿಷದ ವರೆಗೂ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಸವಿಯಲು ರುಚಿ ರುಚಿಯ ತೆಂಗಿನಕಾಯಿ ರೈಸ್ ರೆಡಿಯಾಗುತ್ತದೆ.




Below Post Ad

src="https://blogger.googleusercontent.com/img/b/R29vZ2xl/AVvXsEik3hLMvgO1WDICUKu_VF5lQRG3CMZau_AmC5MorS73B9lRYpLdDKJGTnB8c-U47BHqrAJ7dkiQUqiUWGQ6qg9A5jtCXrPkzIP4GPJfI00HmwhHX-3VG35FjkD_MxxI10r2v4FqSQ8LuyjG/w640-h360/samarasa+new+add.JPG" width="500px" / />



Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.
Qries