ಸಿಲ್ಚಾರ್ : ಅಸ್ಸಾಂನಲ್ಲಿ ಎಪ್ರಿಲ್ 26 ರಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ ಅಕ್ರಮ ಒಳನುಸುಳುವಿಕೆ, ಜಾನುವಾರು ಕಳ್ಳಸಾಗಣೆ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ತಡೆಗಟ್ಟಲು ಕಛಾರ್ ಜಿಲ್ಲಾ ಆಡಳಿತವು ಬಾಂಗ್ಲಾದೇಶದೊಂದಿಗಿನ 33.6 ಕಿಮೀ ಗಡಿಯಲ್ಲಿ ನಿಷೇಧ ವಿಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಡೋ-ಬಾಂಗ್ಲಾದೇಶದ ಗಡಿಯ ಒಂದು ಕಿ.ಮೀ ಪ್ರದೇಶದಲ್ಲಿ ರಾತ್ರಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಈ ಆದೇಶವು ತಕ್ಷಣವೇ ಜಾರಿಗೆ ಬರಲಿದ್ದು ಮುಂದಿನ ಎರಡು ತಿಂಗಳವರೆಗೆ ಜಾರಿಯಲ್ಲಿರುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಸುರ್ಮಾ ನದಿಯಲ್ಲೂ ಯಾವುದೇ ಚಟುವಟಿಕೆಗಳನ್ನು ಕೈಗೊಳ್ಳುವಂತಿಲ್ಲ, ಮೀನುಗಾರಿಕೆ ನಡೆಸಲು ಅನುಮತಿ ಪಡೆಯಬೇಕು. ಇದಲ್ಲದೇ, ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳು ಅಂತರರಾಷ್ಟ್ರೀಯ ಗಡಿಯ ಐದು ಕಿ.ಮೀ ಒಳಗೆ ಕಟಿಗೋರಾ ಪೊಲೀಸ್ ಅಧಿಕಾರಿ ನೀಡಿದ ಪರವಾನಗಿಯೊಂದಿಗೆ ಮಾತ್ರ ಚಲಿಸಲು ಅನುಮತಿಸಲಾಗುತ್ತದೆ. ಈ ನಿರ್ಬಂಧಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.