ಕಾಸರಗೋಡು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸುಳ್ಳು ಪ್ರಚಾರ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಶಿಫಾರಸುಮಾಡಲಾಗಿದ್ದು, ಚುನಾವನೆಗೆ ಸಂಬಂಧಿಸಿದ ನಕಲಿ ಪ್ರಚಾರಗಳ ಬಗ್ಗೆ ಸಾರ್ವಜನಿಕರು ಪೆÇಲೀಸ್ ಸಾಮಾಜಿಕ ಮಾಧ್ಯಮ ನಿಗಾ ತಂಡಗಳಿಗೆ ಮಾಹಿತಿ ನೀಡಬಹುದಾಗಿದೆ.
ಈ ಬಗ್ಗೆ ದೂರು ನೀಡುವವರಿಗಾಗಿ ವಿವಿಧ ಜಿಲ್ಲೆಗಳಲ್ಲಿ ವಾಟ್ಸಪ್ ಸಂಖ್ಯೆಗಳನ್ನೂ ಪ್ರಕಟಿಸಲಾಗಿದೆ. ಕಾಸರಗೋಡು ಜಿಲ್ಲೆಯಲ್ಲಿ ನಕಲಿ ಪ್ರಚಾರಗಳ ಬಗ್ಗೆ ಮೊಬೈಲ್ ಸಂಖ್ಯೆ(9497942714)ಗೆ ದೂರು ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.
ಪರೀಕ್ಷೆ ಮುಂದೂಡಿಕೆ:
ಕಾಸರಗೋಡು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಏಪ್ರಿಲ್ 26ರಂದು ನಡೆಸಲು ಉದ್ದೇಶಿಸಿದ್ದ ವಾಹನ ಚಾಲನಾ ಪರವಾನಗಿ ಪರೀಕ್ಷೆ, ಸಿಎಫ್ ಪರೀಕ್ಷೆ ಹಾಗೂ ವಾಹನ ನೋಂದಣಿ, ನವೀಕರಣ ಎಂಬಿವುಗಳನ್ನು ಮುಂದೂಡಲಾಗಿದೆ. ಪರಿಷ್ಕøತ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ಕಾಸರಗೋಡು ಆರ್ ಟಿ ಒ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.