ಕಾಸರಗೋಡು: ನಗರದ ಹೊಸ ಬಸ್ ನಿಲ್ದಾಣ ವಠಾರದಲ್ಲಿರುವ ಮುಬಾರಕ್ ಮಸೀದಿಯಲ್ಲಿ ಈದುಲ್‍ಫಿತೃ ಅಂಗವಾಗಿ ಪ್ರಾರ್ಥನೆ ಸಲ್ಲಿಸಿ ಹೊರಬಂದ ಉಸ್ಲಿಂ ಬಾಂಧವರಿಗೆ ಆಲ್ ಕೇರಳ ಫೆÇೀಟೋಗ್ರಾಫರ್ಸ್ ಅಸೋಸಿಯೇಶನ್ ಕಾಸರಗೋಡು ಪೂರ್ವ ಘಟಕ ವತಿಯಿಂದ ಪಾನೀಯ, ಸಿಹಿ ತಿನಿಸು ವಿತರಣೆ ನಡೆಯಿತು.
ಡಾ.ಕಾಸಿಂ ಸಮಾರಂಭ ಉದಾಘಟಿಸಿದರು. ಸಂಘಟನೆ ಜಿಲ್ಲಾ ಕೋಶಾಧಿಕಾರಿ ಸುನಿಲ್ ಕುಮಾರ್, ಜಿಲ್ಲಾ ಛಾಯಾಗ್ರಹಣ ಕ್ಲಬ್ ಸಂಯೋಜಕ ದಿನೇಶ್ ಇನ್‍ಸೈಟ್, ಜಿಲ್ಲಾ ಜತೆ ಕಾರ್ಯದರ್ಶಿ ರಾಜೇಂದ್ರನ್, ಜಿಲ್ಲಾ ಸಮಿತಿ ಸದಸ್ಯ ಸುರೇಶ್ ಚಂದ್ರ, ಘಟಕದ ಅಧ್ಯಕ್ಷ ಅಜಿತ್, ಕಾರ್ಯದರ್ಶಿ ಸುಜಿತ್, ಪೆÇ್ರ ಮನೀಷ್ ಮೊದಲಾದವರು ಭಾಗವಹಿಸಿದ್ದರು.