ಕಾಸರಗೋಡು : ಲೋಕಸಭಾ ಕ್ಷೇತ್ರದ ಪೋಲೀಸ್ ನಿರೀಕ್ಷಕರಾಗಿ ನಿಯುಕ್ತಿಗೊಮಡಿರುವ ಸಂತೋಷ್ ಸಿಂಗ್ ಗೌರ್ ಜಿಲ್ಲೆಗೆ ಆಗಮಿಸಿದ್ದು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ಅವರೊಂದಿಗೆ ಸಮಾಲೋಚನೆ ನಡೆಸಿದರು. ಕಾಸರಗೋಡು ಸರ್ಕಾರಿ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ 2024 ರ ಲೋಕಸಭಾ ಚುನಾವಣೆ ಅಂಗವಾಗಿ ಜಿಲ್ಲೆಯಲ್ಲಿನ ಕಾರ್ಯ ಚಟುವಟಿಕೆಗಳ ಕುರಿತು ಮಾಹಿತಿ ಪಡೆದುಕೊಂಡರು. 2009ರ ಬ್ಯಾಚ್ ಐಪಿಎಸ್ ಅಧಿಕಾರಿಯಾಗಿರುವ ಸಂತೋಷ್ ಸಿಂಗ್ ಗೌರ್ ಮಧ್ಯಪ್ರದೇಶ ಕೇಡರ್ ಹೆಡ್‍ಕ್ವಾರ್ಟರ್ ಎಐಜಿ ಯಾಗಿದ್ದಾರೆ. ಪೆÇಲೀಸ್ ನಿರೀಕ್ಷಕರ ಔದ್ಯೋಗಿಕ ಪೋನ್ ಸಂಖ್ಯೆ 7907630299 ಆಗಿದೆ. ವೀಕ್ಷಕರ ನೋಡಲ್ ಅಧಿಕಾರಿ ಲಿಜೋ ಜೋಸೆಫ್ ಉಪಸ್ಥಿತರಿದ್ದರು.