ತಲೆನೋವು ಸಾಮಾನ್ಯವಾಗಿ ಹಲವಾರು ಕಾರಣಗಳಿಂದ ಕಾಡುತ್ತದೆ. ನಿದ್ರೆಯ ಕೊರತೆ, ವಿಶ್ರಾಂತಿಯಿಲ್ಲದ ಕೆಲಸ, ಪ್ರಯಾಣ, ಒತ್ತಡ ಮತ್ತು ಹೊಟ್ಟೆಯ ಕಾಯಿಲೆಗಳು ತಲೆನೋವಿಗೆ ಕಾರಣಗಳಾಗಿವೆ.
ಕೆಲವರಿಗೆ ತಲೆಯ ಒಂದು ಭಾಗದಲ್ಲಿ ಮಾತ್ರ ನೋವು ಇರುತ್ತದೆ. ಇದಕ್ಕೆ ಕಾರಣಗಳೇನು ಎಂಬುದನ್ನು ನೋಡೋಣ.
ತಲೆಯ ಒಂದು ಭಾಗದಲ್ಲಿ ಮಾತ್ರ ನೋವು ಬಂದರೆ ಅದು ನರಗಳಿಗೆ ಸಂಬಂಧಿಸಿದ ಸಮಸ್ಯೆ ಎನ್ನುತ್ತಾರೆ ತಜ್ಞರು. ಮೂರು ಮುಖ್ಯ ವಿಧದ ನೋವುಗಳಿವೆ. ಮೊದಲನೆಯದು ತಲೆಯಲ್ಲಿ ಇರಿತದ ನೋವು. ಇದು ಬೆನ್ನುಹುರಿಯ ಮೇಲ್ಭಾಗ ಮತ್ತು ತಲೆಬುರುಡೆಯ ನಡುವಿನ ನರಗಳಿಂದ ಉಂಟಾಗುತ್ತದೆ. ಇದನ್ನು 'ಆಕ್ಸಿಪಿಟಲ್ ನ್ಯೂರಾಲ್ಜಿಯಾ' ಎಂದು ಕರೆಯಲಾಗುತ್ತದೆ.
ಎರಡನೆಯದು 'ಟೆಂಪೊರಲ್ ಆರ್ಟೆರಿಟಿಸ್'. ಇದು ತಲೆ ಮತ್ತು ಕುತ್ತಿಗೆಯಲ್ಲಿನ ಅಪಧಮನಿಗಳ ಸಮಸ್ಯೆಗಳಿಂದ ಮೆದುಳಿಗೆ ರಕ್ತದ ಹರಿವು ಕಡಮೆಯಾಗುವ ಸ್ಥಿತಿಯಾಗಿದೆ. ಈ ಸ್ಥಿತಿಯನ್ನು ಹೊಂದಿರುವ ಜನರು ಸ್ನಾಯು ನೋವು, ಆಯಾಸ ಮತ್ತು ತಲೆಯ ಒಂದು ಬದಿಯಲ್ಲಿ ನೋವಿನ ಜೊತೆಗೆ ಕೆಳ ದವಡೆಯಲ್ಲಿ ನೋವು ಅನುಭವಿಸಬಹುದು.
ಮೂರನೆಯದು 'ಟ್ರಿಜಿಮಿನಲ್ ನ್ಯೂರಾಲ್ಜಿಯಾ'. ಇವುಗಳು ತಲೆಯೊಂದಿಗೆ ಮುಖದ ಕಾರ್ಯಗಳನ್ನು ಸಂಘಟಿಸುವ ನರಗಳ ಸಮಸ್ಯೆಗಳಾಗಿವೆ. ಈ ನರಗಳ ಸಮಸ್ಯೆ ಇದ್ದರೆ ತಲೆ ಮತ್ತು ಮುಖದ ಒಂದು ಭಾಗದಲ್ಲಿ ನೋವು ಇರುತ್ತದೆ.
ನೋವು ತಲೆಯ ಒಂದು ಬದಿಯಲ್ಲಿದ್ದರೆ, ಇವೆಲ್ಲವೂ ಕೇವಲ ಒಂದು ಸಾಧ್ಯತೆ. ಒಂದು ವೇಳೆ ತಲೆ ನೋವು ದಿನಗಟ್ಟಲೆ ಕಾಡುತ್ತಿದ್ದರೆ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕು.