ತ್ರಿಶೂರ್: ಕಾಲೇಜುಗಳಲ್ಲಿ ಹೊರಗಿನ ವೃತ್ತಿಪರ ಗುಂಪುಗಳ ಕಲಾತ್ಮಕ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾದ ನಿರ್ಬಂಧಗಳೊಂದಿಗೆ ನಡೆಸಲು ಹೊಸ ಮಾರ್ಗಸೂಚಿಗಳು ಅನುಮತಿಸುತ್ತವೆ.
ಕುಸಾಟ್ ಅವಘಡದ ಹಿನ್ನೆಲೆಯಲ್ಲಿ ನೇಮಕಗೊಂಡ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಉನ್ನತ ಶಿಕ್ಷಣ ಇಲಾಖೆಯ ನಿರ್ದೇಶನ ನೀಡಲಾಗಿದೆ.
ಸಂಭಾವನೆಯ ಪ್ರದರ್ಶನಗಳ ಮೇಲಿನ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ. ಆದರೆ ಐದು ದಿನಗಳ ಮೊದಲು ವಿವರಗಳನ್ನು ಸಂಸ್ಥೆಯ ಮುಖ್ಯಸ್ಥರಿಗೆ ತಿಳಿಸಿ ಅನುಮತಿ ಪಡೆಯಬೇಕು. ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಎಲ್ಲಾ ಕಾಲೇಜುಗಳಲ್ಲಿ ಸಾಂಸ್ಥಿಕ ಅಪಾಯ ನಿರ್ವಹಣಾ ಸಮಿತಿಗಳನ್ನು ರಚಿಸಬೇಕು.
200 ಕ್ಕಿಂತ ಹೆಚ್ಚು ಮಂದಿ ಭಾಗವಹಿಸುವ ಕಾರ್ಯಕ್ರಮಗÀಳಿಗೆ ಸಮಿತಿಯಿಂದ ಅನುಮೋದನೆ ಅಗತ್ಯವಿದೆ. ಆಂಬ್ಯುಲೆನ್ಸ್ ವ್ಯವಸ್ಥೆಯೊಂದಿಗೆ ಶಿಕ್ಷಕರು ಮತ್ತು ಪೋಲೀಸ್, ಅಗ್ನಿಶಾಮಕ ದಳ ಮತ್ತು ವೈದ್ಯಕೀಯ ತಂಡದ ಮೇಲ್ವಿಚಾರಣೆಯನ್ನು ಸಂಸ್ಥೆಯ ಮುಖ್ಯಸ್ಥರು ಖಚಿತಪಡಿಸಿಕೊಳ್ಳಬೇಕು.