ಕೋಲ್ಕತ್ತ: ಇಂಡಿಯಾ ಮೈತ್ರಿಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್(ಟಿಎಂಸಿ) ನಡುವೆ ಇದೀಗ ವಿವಾದ ಭುಗಿಲೆದಿದ್ದು, ಕಾಂಗ್ರೆಸ್ ಹಿರಿಯ ನಾಯಕ, ಬಹರಾಂಪುರ ಸಂಸದ ಅಧೀರ್ ರಂಜನ್ ಚೌಧರಿ ವಿರುದ್ಧ ಟಿಎಂಸಿ ಗೂಂಡಾಗಿರಿ ಆರೋಪ ಮಾಡಿದೆ.

'ಬಹರಾಂಪುರದಲ್ಲಿ ನಿಮ್ಮ ದುಷ್ಕೃತ್ಯಗಳು ಗಮನಕ್ಕೆ ಬರುವುದಿಲ್ಲ ಎಂದುಕೊಂಡಿದ್ದೀರಾ? ಚುನಾವಣೆಯಲ್ಲಿ ಸೋಲುವ ಭಯ ಕಾಡಿದೆ ಎಂದು ನಿಮ್ಮ ನಡೆಗಳಿಂದಲೇ ಸ್ಪಷ್ಟವಾಗುತ್ತಿದೆ. ನಮ್ಮ ಕಾರ್ಯಕರ್ತರ ಎದುರು ಗೂಂಡಾಗಿರಿ ಪ್ರದರ್ಶಿಸುವುದರಿಂದ ನಿಮಗೆ ಯಾವುದೇ ಪ್ರಯೋಜನವಿಲ್ಲ' ಎಂದು ಟಿಎಂಸಿ ಬರೆದುಕೊಂಡಿದೆ.
ಗೂಂಡಾಗಿರಿ ಆರೋಪ ಶುದ್ಧ ಸುಳ್ಳು: ಅಧೀರ್
'ಚುನಾವಣಾ ಪ್ರಚಾರ ಮುಗಿಸಿ ಮನೆಗೆ ತೆರಳುತ್ತಿರುವ ವೇಳೆ ನನ್ನ ಬಳಿ ಬಂದ ಕೆಲವರು 'ಗೋ ಬ್ಯಾಕ್' ಘೋಷಣೆ ಕೂಗಿದರು. ನಾನು ಕಾರಿನಿಂದ ಇಳಿದು ಮಾತನಾಡಿಸಿದಾಗ, 'ಕಳೆದ ಐದು ವರ್ಷಗಳಿಂದ ನೀವು ಏನನ್ನೂ ಮಾಡಿಲ್ಲ' ಎಂದರು ಅಷ್ಟೇ. ಗೂಂಡಾಗಿರಿ ಯಾರು ಮಾಡಿದ್ದು?' ಎಂದು ಅಧೀರ್ ರಂಜನ್ ಚೌಧರಿ ಎಎನ್‌ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.