HEALTH TIPS

ವಿದ್ಯಾರ್ಥಿ, ಯುವಜನ ಸಂಘಟನೆಗಳು ಚುನಾವಣಾ ನೀತಿ ಸಂಹಿತೆ ಕಟ್ಟುನಿಟ್ಟಾಗಿ ಪಾಲಿಸಬೇಕು-ನೋಡೆಲ್ ಅಧಿಕಾರಿ

                ಕಾಸರಗೋಡು: ರಾಜಕೀಯ ಪಕ್ಷಗಳು ಮತ್ತು ಅವರ ಯುವ ವಿದ್ಯಾರ್ಥಿ ಸಂಘಟನೆಗಳು ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಚುನಾವಣಾ ನೀತಿ ಸಂಹಿತೆಯ ನೋಡಲ್ ಅಧಿಕಾರಿ ಹಾಗೂ ಅಪರ ಜಿಲ್ಲಾಧಿಕಾರಿ ಸುಫಿಯಾನ್ ಅಹಮ್ಮದ್ ತಿಳಿಸಿದ್ದಾರೆ.

           ವಿವಿಧ ರಾಜಕೀಯ ಪಕ್ಷಗಳು ಮತ್ತು ಅವುಗಳ ಯುವ ವಿದ್ಯಾರ್ಥಿ ಸಂಘಟನೆಗಳು ಅನುಮತಿಯಿಲ್ಲದೆ ಸಾರ್ವಜನಿಕ ಮತ್ತು ಖಾಸಗಿ ಸ್ಥಳಗಳಲ್ಲಿ ಪೆÇೀಸ್ಟರ್, ಬ್ಯಾನರ್, ಪೈಂಟಿಂಗ್ ಮತ್ತು ಧ್ವಜಗಳನ್ನು ಬಳಸಿ ಚುನಾವಣಾ ಪ್ರಚಾರ ಪ್ರಕ್ರಿಯೆಯಲ್ಲಿ ವ್ಯಾಪಕವಾಗಿ ತೊಡಗಿಕೊಂಡಿರುವುದು ಗಮನಕ್ಕೆ ಬಂದಿದೆ. ಇದು ಮಾದರಿ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆಯಾಗಿದೆ. ಪ್ರಕಾಶಕರ ಹೆಸರು ಅಥವಾ ವಿಳಾಸವಿಲ್ಲದೆ ಪೆÇೀಸ್ಟರ್‍ಗಳನ್ನು ಅಥವಾ ಕರಪತ್ರಗಳನ್ನು ಮುದ್ರಿಸುವುದು ಅರ್ ಪಿ ಎ ಕಾಯ್ದೆಯ ಉಲ್ಲಂಘನೆಯಾಗಿದೆ.

             ಯಾವುದೇ ಸಂದರ್ಭದಲ್ಲೂ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಇರಿಸಬಾರದು. ಖಾಸಗಿ ಪ್ರದೇಶಗಳಲ್ಲಿ ವ್ಯಕ್ತಿಯ ಅನುಮತಿ ಪಡೆದು ಚುನಾವಣಾ ಪ್ರಚಾರ ಸಾಮಗ್ರಿ ಅಳವಡಿಸಬಹುದಾಗಿದೆ. ಈ ನಿಟ್ಟಿನಲ್ಲಿ ಖಾಸಗಿ ವ್ಯಕ್ತಿಗಳ ಅನುಮತಿ ಪತ್ರವನ್ನು ಸಂಬಂಧಪಟ್ಟ ಚುನಾವಣಾಧಿಕಾರಿಗೆ ಸಲ್ಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ನಿರ್ಮಿಸಿರುವ ಧ್ವಜಸ್ತಂಭಗಳು ಸೇರಿದಂತೆ ಎಲ್ಲಾ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಸಂಬಂಧಪಟ್ಟವರು ತಕ್ಷಣ ತೆರವುಗೊಳಿಸಬೇಕು.  ಸಂಘಟನೆ ಹೆಸರಲ್ಲಿ ಬ್ಯಾನರ್, ಬಾವುಟ ಮೊದಲಾದವುಗಳನ್ನು ಮತದಾರರ ಮೇಲೆ ಪ್ರಭಾವ ಬೀರಲು ಉಚಿತ ವಿತರಣೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ.   ಅನುಮತಿಯಿಲ್ಲದೆ ಸರ್ಕಾರಿ ಸಂಸ್ಥೆ ಕಾಂಪೌಂಡ್‍ನಲ್ಲಿ ಬ್ಯಾನರ್ ಮತ್ತು ಧ್ವಜಗಳನ್ನು ಪ್ರದರ್ಶಿಸುವುದು ಮತ್ತು ವಾಣಿಜ್ಯ ವಾಹನಗಳ ಮೇಲೆ ದ್ವಜದ ಸ್ಟಿಕ್ಕರ್‍ಗಳನ್ನು ಹಾಕುವುದೂ ಕಾಯ್ದೆಯ ಉಲ್ಲಂಘನೆಯಾಗಿದೆ.

                ಇಂತಹ ಕೃತ್ಯಗಳ ಮೂಲಕ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತಿರುವುದು ಕಂಡುಬಂದಲ್ಲಿ ಪ್ರಜಾಪ್ರತಿನಿಧಿ ಕಾಯ್ದೆ 1951 ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 171 ಎಚ್ ನಲ್ಲಿ ನಿಗದಿಪಡಿಸಿದಂತೆ ಮುಂದಿನ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಮದೂ ತಿಳಿಸಿದ್ದಾರೆ. 

ಏ. 4ರ ವರೆಗೆ ನಾಮಪತ್ರ ಸ್ವೀಕಾರ: 

            2024 ರ ಲೋಕಸಭಾ ಚುನಾವಣೆಗೆ ಸಂಬಂಧಿಸಿ ನಾಮಪತ್ರಗಳನ್ನು ಏಪ್ರಿಲ್ 4 ರಂದು ಮಧ್ಯಾಹ್ನ 3 ಗಂಟೆಯ ವರೆಗೆ ಸ್ವೀಕರಿಸಲಾಗುತ್ತದೆ. ನಾಮಪತ್ರ ಸಲ್ಲಿಸಲು ಹೆಚ್ಚು ಜನರು ಸೇರುವ ಪರಿಸ್ಥಿತಿ ಬಂದರೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಕಛೇರಿಯ ಎದುರು ಪ್ರತ್ಯೇಕವಾಗಿ ಸಜ್ಜೀಕರಿಸಿದ ಸಹಾಯ ಕೇಂದ್ರದಿಂದ ಆ ದಿನ ಬೆಳಿಗ್ಗೆ 10 ಗಂಟೆಗೆ ಟೋಕನ್ ನೀಡಲಾಗುತ್ತದೆ. 

            ಅಭ್ಯರ್ಥಿ ಅಥವಾ ಅವರನ್ನು ಬೇಬಲಿಸುವ ವ್ಯಕ್ತಿ ನಾಮ ಪತ್ರ ಹಾಜರು ಪಡಿಸಿ ಟೋಕನ್ ಪಡೆಯ ಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯಾದ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries