ಕಾಸರಗೋಡು: ಕಡಪ್ಪುರ ಶ್ರೀಕುರುಂಬಾ ಭಗವತಿ ದೇವಸ್ಥಾನಕ್ಕೆ ಸೇರಿದ ಅರಯ ಸಮುದಾಯದ ತಂಡವೊಂದು ಕೊಡುಂಗಲ್ಲೂರು ಶ್ರೀಭಗವತೀ ಕ್ಷೇತ್ರಕ್ಕೆ ಸಾಮೂಹಿಕವಾಗಿ ತೀರ್ಥ ಯಾತ್ರೆ ಬೆಳೆಸಿದರು.
ಕೊಡುಂಗಲ್ಲೂರು ಕುರುಂಬ ಭಗವತಿ ದೇವಸ್ಥಾನದಲ್ಲಿ ನಡೆಯುವ ಮೀನಾ ಭರಣಿ ಉತ್ಸವದ ಅಂಗವಾಘಿ ಅರಯ ಸಮುದಾಯದ ಸಾಮೂಹಿಕ ತಿತ್ ಯಾತ್ರೆ ಆಯೋಜಿಸಲಾಗುತ್ತದೆ. ಕಾಸರಗೋಡು ಕಡಪುರ ಕುರುಂಬಾ ಭಗವತೀ ಕ್ಷೆತ್ರದ ದಕ್ಷಿಣ ಭಾಗದಲ್ಲಿರುವ ಕೊಡುಂಗಲ್ಲೂರು ಗೋಪುರದ ಕ್ಷೇತ್ರ ನಡೆಯ ಮೂಲಕ 300ಕ್ಕೂ ಹೆಚ್ಚುಮಂದಿ ಭಕ್ತಾದಿಗಳು ದಕ್ಷಿಣ ಬಲಿ ಪೂರೈಸಿ ಕೊಡುಂಗಲ್ಲೂರು ದೇವಸ್ಥಾನದಲ್ಲಿ ನಡೆಯಲಿರುವ ವ್ರತ ಹಾಗೂ ಕಾಸರಗೋಡು ಕುರುಂಭಾ ಭಗವತಿ ದೇವಸ್ಥಾನದಿಂದ ಕೊಂಡೊಯ್ದ ಭಂಡಾರ ಕಾಣಿಕೆಯನ್ನು ಸಮರ್ಪಿಸಲಿದ್ದಾರೆ. ನಾಲ್ಕನೇ ದಿನ ಮಧ್ಯಾಹ್ನ ಉತ್ತರಾಯನ ನೆರವೇರಿಸಿ ದೇವಸ್ಥಾನದಲ್ಲಿ ಅಶ್ವತಿ ಕಾವ್ ಸಂದರ್ಶಿಸಿದ ಬಳಿಕ ಹಿಂತಿರುಗಲಿದ್ದಾರೆ.